ದಲಿತ ಯುವಕನಿಗೆ ಕ್ಷೌರ ನಿರಾಕರಣೆ: ಮೂವರ ವಿರುದ್ಧ ಕೇಸು ದಾಖಲು

Prasthutha|

ಸೇಲಂ; ಕ್ಷೌರ ಮಾಡಿಸಿಕೊಳ್ಳಲು ಬಂದ ಯುವಕನೋರ್ವನಿಗೆ ಸಲೂನ್ ಮಾಲೀಕ ಹಾಗೂ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

- Advertisement -


ವಿದುತಲೈ ಕಚ್ವಿ ಸಮುದಾಯಕ್ಕೆ ಸೇರಿದ್ದ 26 ವರ್ಷದ ಪೂವರಸನ್ ಕ್ಷೌರ ಮಾಡಿಸಿಕೊಳ್ಳಲು ಅನ್ನಾಕಿಲಿ ಎಂಬಾತನ ಸಲೂನ್’ ಗೆ ಬಂದಿದ್ದ. ಆದರೆ ಪೂವರಸನ್’ ಗೆ ಕ್ಷೌರ ಮಾಡಲು ನಿರಾಕರಿಸಿದ ಅನ್ನಾಕಿಲಿ ಹಾಗೂ ಸಲೂನ್’ನ ಸಿಬ್ಬಂದಿ ಲೋಗನಾಥನ್, ಜಾತಿಯ ಹೆಸರು ಹೇಳಿ ನಿಂದಿಸಿದ್ದಾರೆ.


ಸಲೂನ್’ನಲ್ಲಿ ನಡೆದ ಘಟನೆಯನ್ನು ಪೂವರಸನ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದರು.
ಬಳಿಕ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವೀಡಿಯೋದಲ್ಲಿ ಸಲೂನ್ ಸಿಬ್ಬಂದಿ ಲೋಕನಾಥ್, ಪಳನಿವೇಲ್ ಎಂಬಾತ ಬೆದರಿಕೆ ಒಡ್ಡಿರುವುದು ದಾಖಲಾಗಿದೆ. ಜೊತೆಗೆ ನೀನು ಯಾರಿಗೆ ಬೇಕಾದರೂ ದೂರು ನೀಡು, ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುವುದು ಕೂಡ ರೆಕಾರ್ಡ್ ಆಗಿದೆ.

- Advertisement -


ಘಟನೆ ನಡೆದ ಮರುದಿನ ಪೂವರಸನ್, ತಲವಾಸಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಘಟನೆ ಕುರಿತು ಮಾಹಿತಿ ನೀಡಿರುವ ತಲವಾಸಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೆಲ್ವರಾಜ್, ದೂರಿನ ಹಿನ್ನೆಲೆಯಲ್ಲಿ ಮೂವರ ವಿರುದ್ಧ
ಸೆಕ್ಷನ್ 3(1) ಎಸ್, 3(1) (ZA) (D) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ [ ದೌರ್ಜನ್ಯ ತಡೆಗಟ್ಟುವಿಕೆ] ತಿದ್ದುಪಡಿ ಕಾಯ್ದೆ 2015 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಳನಿವೇಲ್ ಎಂಬಾತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಅನ್ನಾಕಿಲಿ ಹಾಗೂ ಲೋಕನಾಥನ್ ಗಾಗಿ ಪೊಲೀಸರು ಬಲೆಬೀಸಿದ್ದಾರೆ.

Join Whatsapp