ಹೊಸದಿಲ್ಲಿ : ಕೇಂದ್ರ ಸರಕಾರ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಜೊತೆ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ʼಗಳನ್ನು ವಿಲೀನ ಮಾಡಿದ್ದರಿಂದಾಗಿ ಎರಡೂ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡಾದ ಅಧೀನಕ್ಕೆ ಬರಲಿದೆ. ಈಗ ಬ್ಯಾಂಕ್ ಆಫ್ ಬರೋಡಾ ಕೆಲವು ಬದಲಾವಣೆಗಳನ್ನು ಮಾಡಲಿರುವುದರಿಂದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
ಮಾರ್ಚ್ 1 ರಿಂದ IFSC ಕೋಡ್ ಬದಲಾವಣೆ..!
ಈಗ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮಾರ್ಚ್ 1 ರಿಂದ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಐಎಫ್ ಎಸ್ ಸಿ ಕೋಡ್ʼನ್ನು ಫೆಬ್ರವರಿ 28ರ ನಂತರ ಕ್ಲೋಸ್ ಮಾಡಲಿದೆ. ಹಾಗಾಗಿ ಅದರ ಗ್ರಾಹಕರು ಮಾರ್ಚ್ 1 ರಿಂದ ಹೊಸ IFSC ಕೋಡ್ ಬಳಸಬೇಕಾಗುತ್ತದೆ. ಈ ಎರಡು ಬ್ಯಾಂಕ್ʼಗಳಲ್ಲಿ ನೀವು ಖಾತೆ ಹೊಂದಿದ್ದರೆ, ತಕ್ಷಣ ಹೊಸ IFSC ಕೋಡ್ ಪಡೆಯಲೇ ಬೇಕು. ಇಲ್ಲದಿದ್ದರೆ ಗ್ರಾಹಕರಿಗೆ ಆನ್ ಲೈನ್ʼನಲ್ಲಿ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ.
PNB ಕೂಡ IFSC ಕೋಡ್ʼನ್ನ ಬದಲಿಸಲಿದೆ..!
ಬ್ಯಾಂಕ್ ಆಫ್ ಬರೋಡಾ ಅಲ್ಲದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಹಳೆಯ ಚೆಕ್ ಬುಕ್ ಮತ್ತು IFSC / MICR ಕೋಡ್ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬದಲಾವಣೆಗಳನ್ನು ಮಾಡಲಿದೆ. ಆದರೆ, ಹಳೆಯ ಕೋಡ್ʼಗಳು ಮಾರ್ಚ್ 31ರವರೆಗೂ ಇರಲಿದೆ. ನಂತರ, ಗ್ರಾಹಕರು ಬ್ಯಾಂಕ್ʼನಿಂದ ಹೊಸ ಕೋಡ್ ಮತ್ತು ಚೆಕ್ ಬುಕ್ ಪಡೆಯಬೇಕಾಗುತ್ತದೆ. ಈ ಮಾಹಿತಿಯನ್ನ ಪಿಎನ್ ಬಿ ಟ್ವೀಟ್ ಮಾಡಿದೆ.
ʼಆನ್ಲೈನ್ʼನಲ್ಲಿ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ..!
ಐಎಫ್ ಎಸ್ ಸಿ ಕೋಡ್ ಬದಲಾಯಿಸಿದ ನಂತರ ಗ್ರಾಹಕರು ಆನ್ಲೈನ್ʼನಲ್ಲಿ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಈ ಮಾಹಿತಿಯನ್ನ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದು, ಇ-ವಿಜಯಾ ಮತ್ತು ಇ-ದೇನಾ ಐಎಫ್ ಎಸ್ ಸಿ ಕೋಡ್ʼಗಳನ್ನ ಮಾರ್ಚ್ 1, 2021ರಿಂದ ರದ್ದುಮಾಡಲಾಗುವುದು ಎಂದು ತಿಳಿಸಿದೆ.
IFSC ಕೋಡ್ ಎಂದರೇನು..?
IFSC ಸಂಕೇತವು 11-ಅಂಕಿಗಳ ಸಂಕೇತವಾಗಿದ್ದು, ಮೊದಲ ನಾಲ್ಕು ಅಂಕಿಗಳು ಬ್ಯಾಂಕಿನ ಹೆಸರನ್ನ ಸೂಚಿಸುತ್ತದೆ ಮತ್ತು ನಂತರದ 7 ಅಂಕಿಗಳು ಶಾಖೆಯ ಸಂಕೇತವನ್ನ ಸೂಚಿಸುತ್ತದೆ. ಐಎಫ್ ಎಸ್ ಸಿ ಕೋಡ್ʼನ್ನ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಲು ಬಳಸಲಾಗುತ್ತದೆ.
ಹೊಸ IFSC ಕೋಡ್ ಪಡೆಯುವುದು ಹೇಗೆ..?
ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಹೊಸ IFSC ಕೋಡ್ ಪಡೆಯಬಹುದು ಅಥವಾ ಟೋಲ್ ಫ್ರೀ ಸಂಖ್ಯೆ 18002581700 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಇದಲ್ಲದೇ ಸಂದೇಶದ ಮೂಲಕ ಹೊಸ ಕೋಡ್ʼನ್ನ ಸಹ ನೀವು ಪಡೆಯಬಹುದು. ಇದಕ್ಕಾಗಿ ನೀವು ಸಂದೇಶದಲ್ಲಿ ‘MIGR’ ಅಂತಾ ಬರೆದು ಹಳೆಯ ಖಾತೆ ಸಂಖ್ಯೆಯ ಕೊನೆಯ 4 ಅಂಕಿಗಳನ್ನ ಬರೆಯಿರಿ, ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8422009988 ಗೆ ಈ ಸಂದೇಶವನ್ನ ಕಳುಹಿಸಬೇಕು.