ಐಫೋನ್‌ಗೆ ಕೊಡಲು ಹಣವಿಲ್ಲದೆ ಡೆಲಿವರಿ ಬಾಯ್ ಹತ್ಯೆ ಪ್ರಕರಣ| ಆರೋಪಿ ಬಂಧನ

Prasthutha|

- Advertisement -

ಅರಸೀಕೆರೆ: ಐಫೋನ್‌ಗೆ ಕೊಡಲು ಹಣವಿಲ್ಲದೆ ಡೆಲಿವರಿ ಹುಡುಗನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹೇಂಮತ್ ದತ್ತ(20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಡೆಲಿವರಿ ಬಾಯ್ ಆಗಿ ದುಡಿಯುತ್ತಿದ್ದ ಅರಸೀಕೆರೆ ತಾಲೂಕಿನ ಹಳೇ ಕಲ್ಲನಾಯಕನಹಳ್ಳಿ ಗ್ರಾಮದ ಹೇಮಂತ್ ನಾಯ್ಕ (23) ಮೃತದೇಹ ಕಳೆದ ಫೆ.11ರಂದು ನಗರದ ಅಂಚೆಕೊಪ್ಪಲು ರೈಲ್ವೇ ಸೇತುವೆ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

- Advertisement -

ಏನಿದು ಪ್ರಕರಣ?

ಕೊಲೆಯಾದ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ಪ್ರೆಸ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ
ಹೇಮಂತ್ ದತ್ತ ಫಿಪ್‌ಕಾರ್ಟ್‌ನಲ್ಲಿ 46 ಸಾವಿರ ರೂ. ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದನ್ನು
ಹೇಮಂತ್ ನಾಯ್ಕ ಫೆ. 7ರಂದು ಹೇಮಂತ್ ದತ್ತನ ಮನೆಗೆ ಡೆಲಿವರಿ ಕೊಡಲು ಬಂದಿದ್ದ. ಆಗ ಹೇಮಂತ್ ದತ್ತ ಐಫೋನ್ ಬಾಕ್ಸ್ ತೆರೆಯುವಂತೆ ಹೇಳಿದ್ದಾನೆ.
ಬಾಕ್ಸ್ ತೆರೆಯಲು ನಿರಾಕರಿಸಿದ ಹೇಮಂತ್ ನಾಯ್ಕ, ಹಣ ಪಾವತಿಸುವಂತೆ ಸೂಚಿಸಿದ್ದ.

ಕೊಡಲು ಹಣವಿಲ್ಲದೆ ಹೇಮಂತ್ ನಾಯ್ಕನನ್ನು ಚಾಕುವಿನಿಂದ ಚುಚ್ಚಿ ಆರೋಪಿ ಹೇಮಂತ್ ದತ್ತ ಕೊಲೆ ಮಾಡಿದ್ದ.

ಆ ಬಳಿಕ ಹೇಮಂತ್ ದತ್ತ ಮೃತದೇಹವನ್ನು ನಾಲ್ಕು ದಿನ
ಮನೆಯಲ್ಲೇ ಇರಿಸಿಕೊಂಡಿದ್ದ. ಫೆ. 11ರಂದು ಗೋಣಿ ಚೀಲದಲ್ಲಿ ಮೃತದೇಹವನ್ನು ಮೋಟಾರ್ ಬೈಕ್‌ನಲ್ಲಿ
ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೇ ಸೇತುವೆ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದ.


ಹೇಮಂತ್ ನಾಯ್ಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಫೆ. 8ರಂದು ಸಹೋದರ ಮಂಜ ನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ.

ಆರೋಪಿ ಹೇಮಂತ್ ದತ್ತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ಗೆ ಕೊಡಲು ಹಣವಿಲ್ಲದೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.



Join Whatsapp