ನವದೆಹಲಿ: ದೆಹಲಿ ಗಲಭೆ ತನಿಖೆಯಲ್ಲಿ ನಿಷ್ಕ್ರಿಯತೆ ತೋರಿದ ತಪ್ಪಿತಸ್ಥ ಪೊಲೀಸರ ವೇತನದಲ್ಲಿ 5 ಸಾವಿರ ರೂ. ಕಡಿತಗೊಳಿಸುವಂತೆ ಆದೇಶಿಸಿದೆ. ಮಾತ್ರವಲ್ಲ ದೆಹಲಿ ಗಲಭೆ ಪ್ರಕರಣವನ್ನು ಪೊಲೀಸ್ ಆಯುಕ್ತರು ತನಿಖೆ ನಡೆಸುವಂತೆ ಸೂಚಿಸಿದೆ.
ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟೇಟ್ ಅರುಣ್ ಕುಮಾರ್ ಗರ್ಗ್ ಅವರು, ಈ ಹಿಂದಿನ ಆದೇಶವನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದಂಡ ವಿಧಿಸಿದರು.
ಏಪ್ರಿಲ್ 12 , 2021 ಸೂಚನೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ತಪ್ಪಿತಸ್ಥ ಪೊಲೀಸರು ದಂಡದ ರೂಪದಲ್ಲಿ 5 ಸಾವಿರ ನಗದನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಜಮಾ ಮಾಡಬೇಕು ಎಂದು ಆದೇಶಿಸಿದರು.
ಎಪ್ರಿಲ್ 12 ನ್ಯಾಯಾಲಯ ಕೋಮಲ್ ಮಿಶ್ರಾ ಎಂಬ ಆರೋಪಿಗೆ ಇ- ಚಲನ್ ಪ್ರತಿಯನ್ನು ಪೂರೈಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು. ಈ ಸೂಚನೆಯನ್ನು ಪಾಲಿಸುವಲ್ಲಿ ತನಿಖಾಧಿಕಾರಿ ಅಸಡ್ಡೆ ತೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮೇಲಿನ ಆದೇಶ ನೀಡಿದೆ.
ಈ ಮಧ್ಯೆ ನ್ಯಾಯಾಲಯದ ಈ ಸೂಚನೆಯ ಬಗ್ಗೆ ತನಗೆ ಮಾಹಿತಿ ಇಲ್ಲದ ಕಾರಣ ಇ-ಚಲನ್ ಪ್ರತಿಯನ್ನು ಆರೋಪಿಗೆ ಇನ್ನೂ ಪೂರೈಸಿಲ್ಲ ಎಂದು ತನಿಖಾಧಿಕಾರಿ ನ್ಯಾಯಾಧೀಶರಿಗೆ ಮಾಹಿತಿ ನೀಡಿದ್ದರು.