‘ದೆಹಲಿ ಗಲಭೆ ಪೂರ್ವಯೋಜಿತ: ದೆಹಲಿ ನ್ಯಾಯಾಲಯ

Prasthutha|

ನವದೆಹಲಿ: ಕಳೆದ ವರ್ಷ ರಾಜಧಾನಿ ದೆಹಲಿಯಲ್ಲಿ ನಡೆದ ಗಲಭೆ ಪೂರ್ವಯೋಜಿತ ದಾಳಿ ಎಂದು ದೆಹಲಿ ಹೆಚ್ಚುವರಿ ನ್ಯಾಯಾಲಯ ಹೇಳಿದೆ.

- Advertisement -

ಮಾತ್ರವಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಕೊಲೆ, ದಾಂದಲೆ, ಕ್ರಿಮಿನಲ್ ಸಂಚು ಆರೋಪಗಳನ್ನು ಅಂತಿಮಗೊಳಿಸಲಾಗಿದೆ.

ಫೆಬ್ರವರಿ 25, 2020 ರಲ್ಲಿ ನಡೆದ ಗಲಭೆಯ ವೇಳೆ ದೀಪಕ್ ಎಂಬಾತನ ಕೊಲೆಗೆ ಸಂಬಂಧಿಸಿದಂತೆ ಅನ್ವರ್ ಹುಸೇನ್, ಖಾಸೀಮ್, ಶಾರುಕ್ ಮತ್ತು ಖಾಲಿದ್ ಅನ್ಸಾರಿ ಎಂಬವರನ್ನು ಆರೋಪಿಗಳೆಂದು ಗುರುತಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು.

- Advertisement -

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತಾಬ್ ರಾವತ್ ಆರೋಪಿಗಳ ಕುರಿತು ವರದಿಯನ್ನು ಅಂತಿಮಗೊಳಿಸಿದ್ದು, ಇದೊಂದು ಪೂರ್ವಯೋಜಿತ ದಾಳಿ ಎಂದು ತಿಳಿಸಿದ್ದಾರೆ.

Join Whatsapp