ಅಟೋಪೈಲಟ್ ಸಮಸ್ಯೆ: ಅರ್ಧದಿಂದಲೇ ಹಿಂದಿರುಗಿದ ದಿಲ್ಲಿ- ನಾಸಿಕ್ ಸ್ಪೈಸ್ ಜೆಟ್

Prasthutha|

ನವದೆಹಲಿ: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಸಿಕ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ಗುರುವಾರ ಅಟೋ ಪೈಲಟ್ ಸಮಸ್ಯೆ( ಸ್ವಯಂನಿಯಂತ್ರಣದಡ್ಡಿ) ಅರ್ಧದಿಂದಲೇ ಹಿಂದಿರುಗಿ ಬಂದಿದೆ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಬೋಯಿಂಗ್ 737 ವಿಮಾನವು ಸುರಕ್ಷಿತವಾಗಿ ಹೋದಲ್ಲೇ ಬಂದಿಳಿಯಿತು ಎಂದೂ ಅವರು ತಿಳಿಸಿದ್ದಾರೆ.
“ಸ್ಪೈಸ್ ಜೆಟ್ ಬಿ737 ವಿಟಿ- ಎಸ್ ಎಲ್ ಪಿ ವಿಮಾನವು ದಿಲ್ಲಿ –ನಾಸಿಕ್ ನಡುವಣ ಹಾರಾಟದ ಫ್ಲೈಟ್ ಎಸ್ ಜಿ 8363 ಗುರುವಾರ ಅಟೋಪೈಲಟ್ ಸಮಸ್ಯೆಯಿಂದ ಹಿಂದಿರುಗಿತು” ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದರು.
ಆಟೋ ಪೈಲಟ್ ಸಿಸ್ಟಂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಂಡುಕೊಂಡ ವಿಮಾನದ ಸಿಬ್ಬಂದಿಯು ನಾಸಿಕ್ ಗೆ ಹೊರಟಿದ್ದ ವಿಮಾನವನ್ನು ಅನುಮತಿ ಕೇಳಿ ದಿಲ್ಲಿ ವಿಮಾನ ನಿಲ್ದಾಣಕ್ಕೇ ಬಂದು ಇಳಿಸಿದರು ಎಂದು ಸ್ಪೈಸ್ ಜೆಟ್ ನ ವಕ್ತಾರರು ತಿಳಿಸಿದ್ದಾರೆ. ಸಹಜವಾಗಿಯೇ ವಿಮಾನವು ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ವಾಪಸು ಇಳಿಯಿತು ಮತ್ತು ಪ್ರಯಾಣಿಕರನ್ನೆಲ್ಲ ಸುರಕ್ಷಿತವಾಗಿ ಇಳಿಸಿ ಬೇರೆ ವ್ಯವವಸ್ಥೆ ಮಾಡಲಾಯಿತು.


ಇಂಧನ ಬೆಲೆ ಹೆಚ್ಚಳ ಮತ್ತು ರೂಪಾಯಿ ಅಪಮೌಲ್ಯದಿಂದಾಗಿ ಭಾರೀ ಹಣಕಾಸು ಬಿಕ್ಕಟ್ಟಿಗೆ ಒಳಗಾಗಿದ್ದ ಸ್ಪೈಸ್ ಜೆಟ್ ಇತ್ತೀಚೆಗೆ ಹಲವಾರು ಹಿನ್ನಡೆಗಳಿಗೆ ಒಳಗಾಗಿತ್ತು ಮತ್ತು ಡಿಜಿಸಿಎ- ನಾಗರಿಕ ವಿಮಾನ ಯಾನದ ಮಹಾನಿರ್ದೇಶಕರಿಂದ ನೋಟೀಸನ್ನು ಕೂಡ ಪಡೆದಿತ್ತು.

- Advertisement -


ಜುಲಾಯಿ 27ರಂದು ವಿಮಾನ ಯಾನ ಸುರಕ್ಷಾ ನಿಯಂತ್ರಣ ಪ್ರಾಧಿಕಾರದಿಂದ ಎಂಟು ವಾರದೊಳಗೆ ಅನುಮತಿ ಪಡೆದ ವಿಮಾನ ಹಾರಾಟಗಳಲ್ಲಿ ಕನಿಷ್ಟ 50% ಹಾರಾಟ ನಡೆಸಲೇ ಬೇಕು ಎಂದು ನೋಟೀಸು ಪಡೆದಿತ್ತು.

Join Whatsapp