ನವದೆಹಲಿ: ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯೋರ್ವರ ಮೃತದೇಹ ಆತನದ್ದೇ ಮನೆಯ ಫ್ರಿಡ್ಜ್‌ನಲ್ಲಿ ಪತ್ತೆಯಾದ ಘಟನೆ ಉತ್ತರ ದೆಹಲಿಯ ಸೀಲಾಂಪುರ್‌ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಝಾಕಿರ್ ಎಂದು ಗುರುತಿಸಲಾಗಿದ್ದು, ಈತ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಸಂಬಂಧಿಯೋರ್ವರು ಪೊಲೀಸರಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಪರಿಶೀಲನೆಗೆ ಮನೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಝಾಕೀರ್ ಮೃತದೇಹ ಮನೆಯ ಫ್ರಿಡ್ಜ್‌ನೊಳಗೆ ಪತ್ತೆಯಾಗಿದೆ. ಅಲ್ಲದೇ ಆತನ ತಲೆಯಲ್ಲಿ ಗಾಯ ಪತ್ತೆಯಾಗಿದೆ ಎಂದು ದೆಹಲಿ ಉತ್ತರ ಉಪ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ಸೈನ್ ತಿಳಿಸಿದ್ದಾರೆ.
ಝಾಕಿರ್ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದು, ಪತ್ನಿ ಮತ್ತು ಈತನಿಂದ ಬೇರ್ಪಟ್ಟು ಬೇರೆಯೇ ವಾಸಿಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತಂತೆ ಸುಳಿವು ಪತ್ತೆಯಾಗಿದ್ದು, ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.