ನವದೆಹಲಿ: ವಿಮಾನ ನಿಲ್ದಾಣದ ಪ್ರಾರ್ಥನಾ ಕೊಠಡಿಯಲ್ಲಿ ಕಿಬ್ಲಾ ಕುರಿತ ನಾಮಫಲಕವೊಂದು ಅಳವಡಿಸಲಾಗಿದ್ದು, ಇದರಿಂದ ಆಕ್ರೋಶಿತಗೊಂಡ ಶೈಲೇಂದ್ರ ಪ್ರತಾಪ್ ಸಿಂಗ್ ಜದೌನ್ ಎಂಬಾತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಕುರಿತ ಫೋಟೋವೊಂದನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿರುವ ಆತ ಇದೊಂದು ಕಾನೂನುಬಾಹಿರ ನಡೆ ಎಂದು ಬರೆದಿದ್ದಾರೆ.
ಪ್ರಸಕ್ತ ಅವರು ಉಲ್ಲೇಖಿಸಿದ ನಾಮಫಲಕವು ಕಿಬ್ಲಾವನ್ನು ತೋರಿಸುತ್ತಿದೆ. ಇದು ಮುಸ್ಲಿಮರ ನಮಾಝ್ ನಿರ್ವಹಿಸುವ ದಿಕ್ಕನ್ನು ತೋರಿಸುತ್ತದೆ.
ಪುರುಷರ ಮತ್ತು ಮಹಿಳೆಯರ ಪ್ರಾರ್ಥನಾ ಕೊಠಡಿಗಳಿಂದ ಕಿಬ್ಲಾ ಎಂದು ಬರೆದಿರುವ ನಾಮಫಲಕವನ್ನು ತೆರವುಗೊಳಿಸುವಂತೆ ಒತ್ತಾಯಿಸುವುದಾಗಿ ಜದೌನ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾನೆ.