ಈಶಾನ್ಯ ದೆಹಲಿ ಗಲಭೆ, ಒಂದೇ ಘಟನೆಗೆ ಐದು ಎಫ್ ಐಆರ್, ನಾಲ್ಕನ್ನು ರದ್ದುಪಡಿಸಿದ ಹೈಕೋರ್ಟ್

Prasthutha|

ನವದೆಹಲಿ: ಒಂದೇ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೋಲೀಸರು ಅದು ಹೇಗೆ ಐದು ಪ್ರಥಮ ಮಾಹಿತಿ ವರದಿ-ಎಫ್ ಐಆರ್ ಗಳನ್ನು ಸಲ್ಲಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ನಿಯಮಗಳಿಗೆ ವಿರುದ್ಧವಾದುದು ಎಂದು ಹೇಳಿರುವ ದೆಹಲಿ ಹೈಕೋರ್ಟ್, ಐದು ಎಫ್ಐಆರ್ ಗಳ ಪೈಕಿ ನಾಲ್ಕನ್ನು ರದ್ದುಪಡಿಸಿದೆ.

- Advertisement -


ಕಳೆದ ವರ್ಷ ಈಶಾನ್ಯ ದೆಹಲಿಯ ಗಲಭೆಯ ವೇಳೆ ಮೌಜ್ ಪುರದಲ್ಲಿ ನಡೆದ ಮಾರ್ಚ್ 2020ರ ಬೆಂಕಿ ದುರ್ಘಟನೆಗೆ ಸಂಬಂಧಿಸಿದಂತೆ ಅದೇ ವ್ಯಕ್ತಿಗಳ ಮೇಲೆ ಪೊಲೀಸರು ಐದು ಎಫ್ ಐಆರ್ ದಾಖಲಿಸಿದ್ದರು. ಜಾಫರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಒಂದು ಪ್ರಥಮ ಮಾಹಿತಿ ವರದಿ ಸಾಕಾಗುತ್ತದೆ ಎಂದು ಜಸ್ಟಿಸ್ ಸುಬ್ರಮಣಿಯಂ ಪ್ರಸಾದ್ ಹೇಳಿದರು. ಒಂದೇ ಕೇಸನ್ನು ತುಸು ವ್ಯತ್ಯಾಸದೊಡನೆ ಬರೆದು, ಅದೇ ಆರೋಪಿಗಳನ್ನು ಹೆಸರಿಸಿರುವುದು ಅನಗತ್ಯವಾದುದು ಎಂದು ನ್ಯಾಯಾಧೀಶರು ಹೇಳಿದರು.


“ಇನ್ನು ಆರೋಪಿಗಳ ಬಗ್ಗೆ ಹೊಸ ಮಾಹಿತಿ ಏನಾದರೂ ದೊರೆತರೆ ಅದನ್ನು ಎಫ್ ಐಆರ್ ಸಂಖ್ಯೆ 106/2020 ಅದರಲ್ಲೇ ದಾಖಲಿಸುವಂತೆ ಕೋರ್ಟು ಹೇಳಿತು. ಆರೋಪಿಗಳಲ್ಲಿ ಒಬ್ಬರಾದ ಆತಿರ್ ಅವರ ಪರ ವಾದಿಸಿದ ತಾರಾ ನರೂಲ ಅವರು ಒಂದೇ ಕುಟುಂಬದವರನ್ನು ಬೇರೆ ಬೇರೆ ಕುಟುಂಬದವರು ಎಂದು ತೋರಿಸುವ ಹುನ್ನಾರ ಇದರಲ್ಲಿದೆ. ಒಂದೇ ಅಗ್ನಿಶಾಮಕ ದಳ ಒಮ್ಮೆಗೇ ಬೆಂಕಿ ಆರಿಸಿದೆ. ಅದನ್ನೂ ಐದು ಸಲ ಬರೆಯಲಾಗಿದೆ. ಬೆಂಕಿಯಿಂದ ಆದ ಹಾನಿಯ ಬಗೆಗೂ ಸರಿಯಾದ ವೈಯಕ್ತಿಕ ನಷ್ಟಗಳನ್ನು ಗುರುತಿಸಿಲ್ಲ ಎಂದು ನರೂಲ ವಾದಿಸಿದರು.

- Advertisement -


ಒಂದು ಮನೆಯಲ್ಲಿ ನಾಟಕೀಯವಾಗಿ ಕಾಣಿಸಿಕೊಂಡ ಬೆಂಕಿಯು ಆ ಮಹಡಿಯ ಇತರ ಮನೆಗಳಿಗೆ ಬೇಗನೆ ಹರಡಿತು ಎಂದು ಜಸ್ಟಿಸ್ ಪ್ರಸಾದ್ ಹೇಳಿದರು. ಅಲ್ಲದೆ ಬೆಂಕಿಯಲ್ಲಿ ಸುಟ್ಟ ಮನೆಯ ವಸ್ತುಗಳ ಬಗೆಗೆ ಎಫ್ಐಆರ್ ಐದರಲ್ಲೂ ಒಂದೇ ಮಾದರಿ ಇದೆ. ಒಂದೇ ಮಹಡಿಯ ಒಂದೇ ಮಾದರಿಯ ಫ್ಲಾಟ್ ಆದರೂ ಅಲ್ಲಿ ಉರಿದ ಹೋದ ವಸ್ತುಗಳು ವಿಭಿನ್ನ ಮತ್ತು ವಿಭಿನ್ನ ಬೆಲೆಯವು ಆಗಿರಬೇಕಲ್ಲವೇ ಎಂದು ಪೋಲೀಸರ ಎಫ್ಐಆರ್ ಅದರಲ್ಲಿನ ಪೊಳ್ಳುಗಳನ್ನು ಕೋರ್ಟ್ ಎತ್ತಿ ಹೇಳಿತು.



Join Whatsapp