ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ಸುಳ್ಳು ಸುದ್ದಿ: ಸರ್ವೋಚ್ಚ ನ್ಯಾಯಾಲಯ ಗರಂ

Prasthutha|

ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು, ವೆಬ್ ಪೋರ್ಟಲ್ ಗಳನ್ನು, ಕೆಲವು ಜಾಲ ವಾಹಿನಿಗಳನ್ನು ಕೋಮುವಾದಿ ಪ್ರಚಾರಕ್ಕೆ ಬಳಸುತ್ತಿರುವುದು ಗಂಭೀರವಾಗಿ ಪರಿಗಣಿಸತಕ್ಕ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜಮಿಯ್ಯತುಲ್ ಉಲೇಮಾ ಇ ಹಿಂದ್ ಅವರು ಮರ್ಕಝ್ ನಿಝಾಮುದ್ದೀನ್ ಸಮಾವೇಶದ ಸಂಬಂಧ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವವರ ಬಗ್ಗೆ ಕೇಂದ್ರವು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ಮುಖ್ಯ ನ್ಯಾಯಾಧೀಶ ಎನ್. ವಿ. ರಮಣ ಅವರಿದ್ದ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.

- Advertisement -


ಈ ಖಾಸಗಿ ನ್ಯೂಸ್ ಚಾನೆಲ್ ನ ಪ್ರತಿಯೊಂದು ಸುದ್ದಿಯೂ ಕೋಮು ಪ್ರಚೋದಕವಾಗಿದೆ. ಸುದ್ದಿಗಳಿಗೆ ಕೋಮು ಬಣ್ಣ ಬಳಿಯಲಾಗುತ್ತಿದೆ. ಇದರಿಂದ ಕೊನೆಗೆ ಈ ದೇಶವು ಕೆಟ್ಟ ಹೆಸರು ಪಡೆಯುತ್ತದೆ. ಈ ಖಾಸಗಿ ಚಾನೆಲ್ ಗಳನ್ನು ಎಂದಾದರೂ ನಿಯಮಕ್ಕೊಳಪಡಿಸಲು ನೀವು ಪ್ರಯತ್ನಿಸಿದ್ದೀರಾ? ಎಂದು ಸುಪ್ರೀಂ ಕೋರ್ಟ್ ಪೀಠ ಪ್ರಶ್ನಿಸಿತು.


ಸಾಮಾಜಿಕ ಜಾಲ ತಾಣಗಳು ಶಕ್ತಿಯುತ ಧ್ವನಿಗಳನ್ನು ಮಾತ್ರ ಕೇಳುತ್ತದೆ. ಎಷ್ಟೋ ವಿಷಯಗಳನ್ನು ಜಡ್ಜ್ ಗಳ ಮೇಲೆ, ಸಂಸ್ಥೆಗಳ ಮೇಲೆ ಯಾವುದೇ ಹೊಣೆಗಾರಿಕೆ ಇಲ್ಲದೆ ಬರೆಯಲಾಗಿದೆ ಎಂದು ಜಸ್ಟಿಸ್ ಗಳಾದ ಸೂರ್ಯ ಕಾಂತ್, ಎ. ಎಸ್. ಬೋಪಣ್ಣ ಅವರಿದ್ದ ಪೀಠವು ಹೇಳಿತು.

- Advertisement -


ಯೂ ಟ್ಯೂಬ್ ಚಾನೆಲ್ ಮತ್ತು ವೆಬ್ ಪೋರ್ಟಲ್ ಗಳ ಮೂಲಕ ಎಗ್ಗಿಲ್ಲದೆ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಯಾರು ಬೇಕಾದರೂ ಜಾಲ ತಾಣದಲ್ಲಿ ಚಾನೆಲ್ ಆರಂಭಿಸಬಹುದು ಮತ್ತು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಬಹುದು ಎಂದು ಪೀಠ ಹೇಳಿತು.
ನಾನಾ ಉಚ್ಚ ನ್ಯಾಯಾಲಯಗಳಲ್ಲಿರುವ ಇಂಥ ಅರ್ಜಿಗಳನ್ನು ಒಂದು ಕಡೆಗೆ ತರುವ ಸರಕಾರದ ಹೇಳಿಕೆಗೆ ಒಪ್ಪಿದ ಸರ್ವೋಚ್ಚ ನ್ಯಾಯಾಲಯವು, ಹೊಸ ಐಟಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.

Join Whatsapp