ಬಿಜೆಪಿ ನಾಯಕ ವಿರುದ್ಧ ಅತ್ಯಾಚಾರ ಪ್ರಕರಣ: ಎಫ್ ಐಆರ್ ದಾಖಲಿಸಲು ದೆಹಲಿ ಹೈಕೋರ್ಟ್ ಸೂಚನೆ

Prasthutha|

ನವದೆಹಲಿ: ಏಪ್ರಿಲ್ 2018 ರಲ್ಲಿ ದಕ್ಷಿಣ ದೆಹಲಿಯ ಛತ್ತರ್ ಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಶಹನವಾಜ್ ಹುಸೇನ್ ವಿರುದ್ಧ ಎಫ್ ಐಆರ್ ದಾಖಲಿಸಲು ದೆಹಲಿ ಪೊಲೀಸರು ಸಂಪೂರ್ಣ ಹಿಂಜರಿಯುತ್ತಿದ್ದಾರೆ ಎಂದು ಟೀಕಿಸಿದ ದೆಹಲಿ ಹೈಕೋರ್ಟ್ “ತಕ್ಷಣವೇ” ಎಫ್ ಐಆರ್ ದಾಖಲಿಸುವಂತೆ ಬುಧವಾರ ನಿರ್ದೇಶಿಸಿದೆ.

- Advertisement -

ಮೂರು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯದಲ್ಲಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ ನ್ಯಾಯಮೂರ್ತಿ ಆಶಾ ಮೆನನ್, ಹುಸೇನ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ 2018 ರ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದರು. ಎಫ್ ಐಆರ್ ದಾಖಲಿಸಲು ಅಧಿಕಾರಿಗೆ ಕಾನೂನಿನ ಅಡಿಯಲ್ಲಿ ಬಾಧ್ಯತೆ ಇತ್ತು.

ಆದರೆ ಜೂನ್ 21, 2018 ರಂದು ಮ್ಯಾಜಿಸ್ಟ್ರೇಟ್ ಮುಂದೆ ದೂರು ದಾಖಲಿಸುವವರೆಗೂ  ಪೊಲೀಸರು ಹುಸೇನ್ ವಿರುದ್ಧ ಯಾವುದೇ ಕೈಗೊಂಡಿರಲಿಲ್ಲ. ಜೂನ್ 2018 ರಲ್ಲಿ ಪೊಲೀಸ್ ಆಯುಕ್ತರಿಂದ ದೂರು ಸ್ವೀಕರಿಸಿದ ನಂತರ ಎಫ್ ಐಆರ್ ದಾಖಲಿಸದಿರುವುದಕ್ಕೆ ಪೊಲೀಸರು ವಿವರಿಸಲು ಸಾಕಷ್ಟು ಇದೆ ಎಂದು ಹೇಳಿದರು.

- Advertisement -

ಏಪ್ರಿಲ್ 12, 2018 ರಂದು ಹುಸೇನ್ ತನ್ನ ಛತ್ತರ್ ಪುರ ಫಾರ್ಮ್ ಹೌಸ್ ನಲ್ಲಿ ಮಾದಕವಸ್ತು ಸೇವಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೆಹಲಿ ಮೂಲದ ಮಹಿಳೆಯೊಬ್ಬರು ಆರೋಪಿಸಿದ್ದರು

Join Whatsapp