ದೆಹಲಿ ಪ್ರತಿಭಟನೆ ವೇಳೆ ಮುಸ್ಲಿಮ್ ವಿರೋಧಿ ಘೋಷಣೆ : ಬಂಧಿತ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯಗೆ ಜಾಮೀನು !

Prasthutha|

ನವದೆಹಲಿ: ಆಗಸ್ಟ್ 8ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಮುಸ್ಲಿಮರ ವಿರುದ್ಧ ಹಿಂಸಾಚಾರದ ಘೋಷಣೆಗಳನ್ನು ಕೂಗಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರಿಗೆ ಬುಧವಾರ ಜಾಮೀನು ನೀಡಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆ ದೆಹಲಿಯ ವಿವಿಧ ಭಾಗಗಳಿಂದ ಉಪಾಧ್ಯಾಯ ಮತ್ತು ಇತರ ಐದು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ದೀಪಕ್ ಸಿಂಗ್, ವಿನೋದ್ ಶರ್ಮಾ, ವಿನೀತ್ ಬಾಜಪೇಯಿ, ಪ್ರೀತ್ ಸಿಂಗ್ ಮತ್ತು ದೀಪಕ್ ಕುಮಾರ್ ಬಂಧಿತ ಇತರ ಆರೋಪಿಗಳೆಂದು ಗುರುತಿಸಲಾಗಿದೆ. ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಧಾರ್ಮಿಕ ದ್ವೇಷ ಮತ್ತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾಯ್ದೆ ಸೆಕ್ಷನ್ 51 ರ ಆರೋಪದ ಅಡಿಯಲ್ಲಿ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

- Advertisement -

ಉಪಾಧ್ಯಾಯ ಅವರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇಂದು ದೆಹಲಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ ಅಶ್ವಿನಿ ಅವರಿಗೆ ಜಾಮೀನು ಮಂಜೂರಾಗಿದೆ. ಉಪಾಧ್ಯಾಯರ ಪರವಾಗಿ ವಾದಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಜಂತರ್ ಮಂತರ್‌ನಲ್ಲಿ ಭಾಗವಹಿಸುವವರು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗುತ್ತಿದ್ದಾಗ ಬಿಜೆಪಿ ನಾಯಕ ಉಪಾಧ್ಯಾಯ ಅವರು ಗಾಜಿಯಾಬಾದ್‌ನಲ್ಲಿದ್ದರು ಎಂದು ಅವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಸಿದ್ಧಾರ್ಥ್ ಲೂತ್ರಾ, ಪ್ರದೀಪ್ ರೈ, ಅಶ್ವನಿ ದುಬೆ ಮತ್ತು ಗೋಪಾಲ್ ಶಂಕರನಾರಾಯಣನ್ ಕೂಡ ಜತೆಗಿದ್ದರು.

Join Whatsapp