ನವದೆಹಲಿ: ಕೇಂದ್ರೀಯ ತನಿಖಾ ತಂಡವು ಎರಡರಿಂದ ಮೂರು ದಿನಗಳಲ್ಲೇ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾರನ್ನು ಮುಂದಿನ 10 ದಿನಗಳಲ್ಲಿ ಬಂಧಿಸಲಾಗುತ್ತದೆ ಎಂದು ಕೇಳಿದ್ದೆನು. ಆದರೆ ಸಿಬಿಐ ಅಧಿಕಾರಿಗಳ ಉತ್ಸಾಹವನ್ನು ನೋಡುತ್ತಿದ್ದಂತೆ ಎರಡರಿಂದ ಮೂರು ದಿನಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಭಾವನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆಮ್ ಆದ್ಮಿ ಪಕ್ಷ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ಪಡೆಯುತ್ತಿರುವ ಜನ ಬೆಂಬಲವು ಬಿಜೆಪಿಯ ಕಣ್ಣು ಕುಕ್ಕುತ್ತಿದೆ. ಜನರು ತಮಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲವನ್ನು ನೀಡುತ್ತಿದ್ದಂತೆ ಬಿಜೆಪಿ ಉಲ್ಟಾ ಹೊಡೆಯುತ್ತಿದೆ. ಕೇಂದ್ರ ಸರ್ಕಾರವು ನನ್ನ ಕುತ್ತಿಗೆ ಹಿಡಿದು ಬೆದರಿಸುವ ಉತ್ಸಾಹದಲ್ಲಿದೆ. ಆದರೆ ನನ್ನ ಬಗ್ಗೆ ಚಿಂತಿಸಬೇಡಿ, ನಾನು ಪ್ರಾಮಾಣಿಕತೆಯ ಕುತ್ತಿಗೆಯನ್ನು ಹೊಂದಿದ್ದು, ಯಾವುದೇ ಆತಂಕವಿಲ್ಲ,” ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.