ಹಣದುಬ್ಬರ, ನಿರುದ್ಯೋಗದ ವಿರುದ್ಧ ಕಾಂಗ್ರೆಸ್’ನಿಂದ ದೆಹಲಿ ಚಲೋ ಜಾಥಾ

Prasthutha|

ನವದೆಹಲಿ: ದೇಶದಲ್ಲಿನ ಹಣದುಬ್ಬರ, ನಿರುದ್ಯೋಗ ಸಮಸ್ಯೆಯನ್ನು ವಿರೋಧಿಸಿ ಕಾಂಗ್ರೆಸ್ ಆಗಸ್ಟ್ 28 ರಂದು ದೆಹಲಿ ಚಲೋ ಜಾಥಾ ಹಮ್ಮಿಕೊಂಡಿದೆ.

- Advertisement -

ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಪಕ್ಷವು ಮುಂಬರುವ ವಾರಗಳಲ್ಲಿ ಬೆಲೆಯೇರಿಕೆ ಮತ್ತು ನಿರುದ್ಯೋಗದ ವಿರುದ್ಧ ಸರಣಿ ಪ್ರತಿಭಟನೆಗಳೊಂದಿಗೆ ಈ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯಲಿದೆ ಎಂದು ತಿಳಿಸಿದ್ದಾರೆ.

ಪಕ್ಷದ ವತಿಯಿಂದ ನಡೆಯುವ ಈ ಹೋರಾಟದ ಭಾಗವಾಗಿ ಆಗಸ್ಟ್ 17 ರಿಂದ 23 ರವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಂಡಿ, ಚಿಲ್ಲರೆ ಮಾರುಕಟ್ಟೆ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ‘ಮೆಹಂಗೈ ಚೌಪಾಲ್’ ಎಂಬ ಹೆಸರಿನಲ್ಲಿ ಹಲವಾರು ಸಂವಾದ ಸಭೆಗಳನ್ನು ಆಯೋಜಿಸಲಿದೆ. ಪ್ರತಿಭಟನೆಯ ಕೊನೆಯಲ್ಲಿ ಆಗಸ್ಟ್ 28 ರಂದು ‘ಮೆಹಂಗೈ ಪರ್ ಹಲ್ಲಾ ಬೋಲ್’ ಎಂಬ ಜಾಥಾದ ಮೂಲಕ ದೆಹಲಿಯಲ್ಲಿ ಸಮಾರೋಪಗೊಳ್ಳಲಿದೆ. ಈ ಸಂದರ್ಭದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರತಿಭಟನೆಯಲ್ಲಿ ವಿವಿಧ ಪ್ರದೇಶ ಸಮಿತಿಗಳು ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಮೆಹಂಗೈ ಪರ್ ಹಲ್ಲಾ ಬೋಲೋ – ಚಲೋ ದಿಲ್ಲಿ’ ಎಂಬ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ನಡೆಸಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Join Whatsapp