ರಸ್ತೆ ಸು’ರಕ್ಷಾ’ ಬಂಧನ: ರಸ್ತೆಗುಂಡಿ ವಿರುದ್ಧ ಯುವಕನ ಏಕಾಂಗಿ ಪ್ರತಿಭಟನೆ

Prasthutha|

ಮಂಗಳೂರು: ನಗರದೊಳಗಿನ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳ ದುರಸ್ತಿ ಮಾಡುವಂತೆ ಹಾಗೂ ಸಮರ್ಪಕ ರಸ್ತೆಗೆ ಆಗ್ರಹಿಸಿ ಯುವಕನೋರ್ವ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

- Advertisement -

ಮಂಗಳೂರಿನ ಲಿಖಿತ್ ಎಂಬ ಯುವಕ ಈ ಏಕಾಂಗಿ ಹೋರಾಟ ನಡೆಸಿದ್ದು, ಇತ್ತೀಚೆಗೆ ನಂತೂರಿನಲ್ಲಿ ರಸ್ತೆಗುಂಡಿಗೆ ಬಿದ್ದು ಮೃತಪಟ್ಟ ಗೆಳೆಯ ಆತಿಷ್‌ನ ನ್ಯಾಯಕ್ಕಾಗಿ ಆಗ್ರಹಿಸಿ ಈ ವಿನೂತನ ಶೈಲಿಯ ಪ್ರತಿಭಟನೆ ನಡೆಸಿದ್ದಾನೆ.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಲಿಖಿತ್, ಮಿತ್ರ ಆತಿಷ್ ನಂತೂರ್‌ನಲ್ಲಿ ರಸ್ತೆಯಲ್ಲಿದ್ದ ಹೊಂಡ ತಪ್ಪಿಸುವ ಭರದಲ್ಲಿ ಬೈಕ್‌ನಿಂದ ಬಿದ್ದು, ತಲೆಗೆ ಏಟಾಗಿ ಮೃತಟ್ಟಿದ್ದಾನೆ. ಹಾಗಂತ ಇದು ಅಪಘಾತವಲ್ಲ, ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿದ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಉತ್ತಮ ರಸ್ತೆ ನಿರ್ಮಿಸುವ ಮೂಲಕ ಆತಿಷ್ ಸಾವಿಗೆ ನ್ಯಾಯ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

- Advertisement -

ಜಸ್ಟೀಸ್ ಫಾರ್ ಆತಿಷ್ ಎಂದು ಲಿಖಿತ್ ಸಹಿತ ಆತನ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದು, ಅದರ ಭಾಗವಾಗಿ ಇಂದು ಈ ವಿನೂತನ ಪ್ರತಿಭಟನೆ ನಡೆದಿದೆ.

Join Whatsapp