ವೈದ್ಯರ ನೇಮಿಸುವಲ್ಲಿ ವಿಳಂಬ ಧೋರಣೆ : ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ

Prasthutha|

ಲಕ್ನೋ: ಉತ್ತರ ಪ್ರದೇಶ ಸರ್ಕಾರವು ಖಾಲಿ ಹುದ್ದೆಗೆ ವೈದ್ಯರ ನೇಮಕ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

- Advertisement -

ಉತ್ತರ ಪ್ರದೇಶ ಸರ್ಕಾರ ಮತ್ತು ಉತ್ತರ ಪ್ರದೇಶ ಲೋಕಸೇವಾ ಆಯೋಗದ ಪರಸ್ಪರ ಸಂವಹನ ಕೊರತೆಯಿಂದ ವೈದ್ಯರ ನೇಮಕ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ರಾಜ್ಯ ಸರ್ಕಾರ ಮತ್ತು ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಅಭಯ್‌ ಎಸ್‌. ಓಕಾ ಈ ಸಂಬಂಧಿತ ಅರ್ಜಿಯನ್ನು ವಿಚಾರಣೆಯನ್ನು ನಡೆಸಿ, ಒಂದು ವೇಳೆ ಅತೀ ಶೀಘ್ರದಲ್ಲಿ ವೈದ್ಯರ ನೇಮಕ ಮಾಡದಿದ್ದರೆ ಪ್ರತ್ಯೇಕ ಏಜೆನ್ಸಿ ರಚಿಸಲು ಆದೇಶ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

Join Whatsapp