ವಯಸ್ಕ ಮಹಿಳೆ ತನಗಿಷ್ಟವಾದವರ ಜೊತೆ ವಾಸಿಸಬಹುದು : ದೆಹಲಿ ಹೈಕೋರ್ಟ್

Prasthutha|

ನವದೆಹಲಿ : ವಯಸ್ಕ ಮಹಿಳೆ ತನಗೆ ಇಷ್ಟವಾದವರ ಜೊತೆ ಜೀವಿಸಲು ಮುಕ್ತಳು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ನ್ಯಾ. ವಿಪಿನ್ ಸಾಂಘಿ ಮತ್ತು ನ್ಯಾ. ರಜನೀಶ್ ಭಟ್ನಾಗರ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.

- Advertisement -

ವಿವಿಧ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನು ತರುವುದಾಗಿ ಘೋಷಿಸಲ್ಪಟ್ಟಿರುವ ನಡುವೆ, ಇಂತದ್ದೊಂದು ತೀರ್ಪು ಮಹತ್ವವನ್ನು ಪಡೆದಿದ್ದು, ರಾಷ್ಟ್ರ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಸುಲೇಖಾ ಎಂಬ 20 ವರ್ಷದ ಯುವತಿ ತಾನು ಪ್ರೀತಿಸುತ್ತಿದ್ದ ಬಬ್ಲೂ ಜೊತೆ ವಾಸಿಸಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಯುವತಿ ಅಪ್ರಾಪ್ತ ವಯಸ್ಸಿನವಳು ಎಂಬ ಕಾರಣ ನೀಡಿ, ಯುವತಿಯನ್ನು ಅಪಹರಿಸಲಾಗಿದೆ ಎಂದು ಆಕೆಯ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

Join Whatsapp