ಬೆಂಗಳೂರು: ಕೊರೊನಾ ಎರಡನೆ ಅಲೆ ನಂತರ ಖಾಸಗಿ ಆಸ್ಪತ್ರೆ, ಲ್ಯಾಬ್ ಗಳು ಸೇರಿದಂತೆ ಕೊರೊನಾ ನಿರ್ವಹಣೆ ಕುರಿತು ಉಳಿಸಿಕೊಳ್ಳಲಾಗಿರುವ ಎಲ್ಲ ಬಾಕಿ ಪಾವತಿಗೆ ಸೂಚನೆ ನೀಡಿದ್ದು, ಪ್ರಸ್ತುತ ಮಾರ್ಚ್ ತಿಂಗಳವರೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳಿಗೂ ಅಗತ್ಯ ಹಣಕಾಸು ಬಿಡುಗಡೆ ಮಾಡುವಂತೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಕೊರೊನಾ ಎರಡನೇ ಅಲೆ ಕಡಿಮೆಯಾದ ನಂತರ ಯಾವ ರೀತಿ ಸ್ಥಿತಿಯಿದೆ, ನವಂಬರ್ ತಿಂಗಳಿನಲ್ಲಿ ಏನಿಲ್ಲ ಆಗಿದೆ. ಕ್ಲಸ್ಟರ್ ಗಳ ಸೃಷ್ಟಿಗೆ ಕಾರಣವೇನು? ಎಷ್ಟು ಜಿಲ್ಲೆಗಳಲ್ಲಿ ಕ್ಲಸ್ಟರ್ ಬಂದಿದೆ. ಅವುಗಳ ನಿರ್ವಹಣೆ ಯಾವ ರೀತಿ ಇದೆ. ಹೊಸ / ಪ್ರಬೇಧ ಒಮಿಕ್ರಾನ್ ಬಂದ ನಂತರ ಅದರ ಪರಿಣಾಮ ಏನಾಗಿದೆ? ಅವರ ಸಂಪರ್ಕಿತರ ವಿವರಗಳ ಜೊತೆಗೆ ಬೇರೆ ಬೇರೆ ದೇಶದಲ್ಲಿ ಹೊಸ ತಳಿ ಒಮಿಕ್ರಾನ್ ಬಗ್ಗೆ ಪ್ರೋಟೋಕಾಲ್ ಏನಿದೆ? ಚಿಕಿತ್ಸೆ ಯಾವ ರೀತಿ ಇದೆ. ನಾವು ಎಲ್ಲ ಸಿದ್ಧತೆ ಯಾವ ರೀತಿ ಮಾಡಿಕೊಳ್ಳಬೇಕು ಎಂದು ಸಂಪೂರ್ಣವಾದ ವಿವರವನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ನಾಳೆ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಿ ಕೆಲ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಕಳೆದ ಬಾರಿ ಕೊರೊನಾ ನಿರ್ವಹಣೆಯಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಮತ್ತು ಅದರಲ್ಲಿ ವಿಶೇಷವಾಗಿ ಆಮ್ಲಜನಕ ಘಟಕ ಎಷ್ಟು ಹಾಕಬೇಕಾಗಿತ್ತು, ಎಷ್ಟು ಹಾಕಲಾಗಿದೆ. ಈಗಾಗಲೇ ಅಳವಡಿಸಿರುವ ಘಟಕಕ್ಕೆ ಎಷ್ಟು ಹಣ ಬಾಕಿ ಕೊಡಬೇಕಿದೆ. ಬಿಬಿಎಂಪಿ ಮತ್ತು ಕಂದಾಯ ಇಲಾಖೆ ಏನು ಕ್ರಮ ಕೈಗೊಂಡಿತ್ತು ಅದಕ್ಕೆ ಏನು ಹಣ ಕೊಡಬೇಕು. ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆ ಗಳಿಗೆ ಎಷ್ಟು ಹಣ ಕೊಡಲಾಗಿದೆ ಇನ್ನು ಎಷ್ಟು ಬಾಕಿ ಇದೆ ಎಂದು ಹಣಕಾಸು ಸ್ಥಿತಿಗತಿ ಕುರಿತು ಎರಡು ವಿಭಾಗದಲ್ಲಿ ಚರ್ಚೆ ಮಾಡಲಾಗಿದೆ. ಬಾಕಿ ಹಣ ಬಿಡುಗಡೆಗೆ ಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಕೋವಿಡ್ ಬಗ್ಗೆ ಮುಂದೆ ಯಾವ ರೀತಿ ಎಚ್ಚರಿಕೆ ತೆಗೆದುಕೊಳ್ಳಬೇಕು, ಮಾರ್ಚ್ ವರೆಗೂ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎನ್ನುವ ಕುರಿತು ಹಣಕಾಸು ವ್ಯವಸ್ಥೆಗಳ ಕುರಿತು ಚರ್ಚೆ ಮಾಡಿದ್ದೇವೆ. ಕೊರೊನಾ ನಿರ್ವಹಣೆ ಬಗ್ಗೆ ಎಲ್ಲ ವಿವರಗಳನ್ನು ಪಡೆದುಕೊಂಡಿದ್ದು, ಇದನ್ನು ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇನೆ. ತಜ್ಞರನ್ನು ಆಹ್ವಾನಿಸಿ ಅವರ ಸಲಹೆ ಪಡೆದುಕೊಂಡು ನಂತರ ಸಂಪುಟದಲ್ಲಿ ಎಸ್ಒಪಿ ಮಾರ್ಪಾಡು ಇತ್ಯಾದಿ ಕ್ರಮಗಳ ಕುರಿತು ನಿರ್ಧರಿಸಲಾಗುತ್ತದೆ ಎಂದರು