ಭಾರತೀಯ ಸೇನಾ ಹೆಲಿಕಾಪ್ಟರ್ ಪತನ : 13 ಮಂದಿ ದುರ್ಮರಣ ; ಬಿಪಿನ್ ರಾವತ್ ದೇಹಸ್ಥಿತಿ ಗಂಭೀರ !

Prasthutha|

►ಸಂಜೆ 6.30ಕ್ಕೆ ಪ್ರಧಾನಿ ಮೋದಿಯಿಂದ ರಕ್ಷಣಾ ಪ್ರಮುಖರ ತುರ್ತು ಸಭೆ !
►ರಾಷ್ಟ್ರಪತಿಗಳ ಅಧಿಕೃತ ಮುಂಬೈ ಪ್ರವಾಸ ರದ್ದು !
►ನತದೃಷ್ಟ ಹೆಲಿಕಾಪ್ಟರಿನ ಪೈಲಟ್  ಪೃಥ್ವಿರಾಜ್ ಸಿಂಗ್ ಚೌಹಾನ್

- Advertisement -

ಊಟಿ : ಇಂದು ಮಧ್ಯಾಹ್ನ ತಮಿಳುನಾಡಿನ ಕೂನೂರು ಬಳಿಯಲ್ಲಿನ ಕಟ್ಟೇರಿ ಎಂಬಲ್ಲಿ ಭಾರತೀಯ ಸೇನಾ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ 14 ಮಂದಿಯ ಪೈಕಿ 13 ಮಂದಿ ಮೃತರಾಗಿರುವ ಕುರಿತು ಆಸ್ಪತ್ರೆ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ಅದೇ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ದೇಹಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಡಿಎನ್ಎ ಪರೀಕ್ಷೆ ನಡೆಸಿ ಮೃತಪಟ್ಟವರ ಗುರುತು ಪತ್ತೆ ಮಾಡಲಾಗುತ್ತದೆ ಎಂದು ಸೇನಾ ಆಸ್ಪತ್ರೆಯ ಮೂಲಗಳು ತಿಳಿಸಿವೆ. ನತದೃಷ್ಟ ಹೆಲಿಕಾಪ್ಟರಿನ ಪೈಲಟ್’ರನ್ನು ವಿಂಗ್ ಕಮಾಂಡರ್ ಪೃಥ್ವಿರಾಜ್ ಸಿಂಗ್ ಚೌಹಾನ್ ಎಂದು ಗುರುತಿಸಲಾಗಿದೆ.

- Advertisement -

ಇಂದು ಸಂಜೆ 6.30ಕ್ಕೆ ಪ್ರಧಾನಿ ಮೋದಿ ಅವರು ರಕ್ಷಣಾ ಇಲಾಖೆಯ ಪ್ರಮುಖರ ಸಭೆಯೊಂದನ್ನು ಕರೆದಿದ್ದು, ಘಟನೆಯ ಕುರಿತು ಅಧಿಕೃತ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದೇ ವೇಳೆ ರಾಷ್ಟ್ರಪತಿಗಳು ತನ್ನ ಅಧಿಕೃತ ಮುಂಬೈ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ತಿಳಿದು ಬಂದಿದೆ.

Join Whatsapp