ನವದೆಹಲಿ: ನಾಗಲ್ಯಾಂಡ್, ಅಸ್ಸಾಮ್, ಮಣಿಪುರ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ-AFSPA ಭದ್ರತಾ ವ್ಯವಸ್ಥೆಯನ್ನು ತೆರವುಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈಶಾನ್ಯ ಭಾರತದಲ್ಲಿ ದೊಂಬಿ, ಆಂತರಿಕ ಅಭದ್ರತೆ, ಹಿಂಸಾಚಾರಗಳಿಗೆ ಕೊನೆ ಹಾಡಿ ಮಾತುಕೆಗಳ ಮೂಲಕ ಶಾಂತಿಗೆ ಈ ಕಾಯ್ದೆ ನಾಂದಿ ಹಾಡಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿದರು.
ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರಗಳ ಗೊಂದಲಮಯ ಪ್ರದೇಶಗಳಲ್ಲಿ ಎಎಫ್ ಎಸ್ ಪಿಎ- ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಗೆ ಸ್ವಲ್ಪ ಕಡಿವಾಣ ಹಾಕಲು ಕೇಂದ್ರ ಸರಕಾರವು ತೀರ್ಮಾನಿಸಿದೆ ಎಂದು ಅಮಿತ್ ಶಾ ತಿಳಿಸಿದರು.
ಎಲ್ಲೆಲ್ಲಿ ಭದ್ರತೆ ಸರಿಯಾಗಿದೆಯೋ, ಎಲ್ಲೆಲ್ಲಿ ವೇಗವಾಗಿ ಅಭಿವೃದ್ಧಿ ಆಗುತ್ತಿದೆಯೋ ಅಲ್ಲೆಲ್ಲ AFSPA ಹಿಡಿತವನ್ನು ಸಡಿಲಿಸಲಾಗುತ್ತದೆ.
1942ರಲ್ಲಿ ಭಾರತ ಬಿಟ್ಟು ತೊಲಗಿ ಎಂಬ ಭಾರತ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಬ್ರಿಟಿಷರು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಜಾರಿಗೆ ತಂದಿತು. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆ ಕಾಯ್ದೆಯನ್ನು ಉಳಿಸಿಕೊಳ್ಳಲು ತೀರ್ಮಾನಿಸಿದರು. ಮೊದಲಿಗೆ ಸುಗ್ರೀವಾಜ್ಞೆ ಮೂಲಕ ಮತ್ತು 1958ರಲ್ಲಿ ಕಾಯ್ದೆ ಮೂಲಕ ಅದನ್ನು ಉಳಿಸಿಕೊಳ್ಳಲಾಯಿತು.
ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ರಾಜ್ಯಗಳಲ್ಲಿ AFSPA ಗಡಿ ಉಗ್ರ ದಾರಿ ಇರಬಾರದೆಂಬುದಕ್ಕೆ ಜಾರಿಯಲ್ಲಿತ್ತು. ಪಂಜಾಬಿನಲ್ಲಿ ಮೊದಲಿಗೆ ಮತ್ತು ಅನಂತರ ತ್ರಿಪುರಾ ಮತ್ತು ಮೇಘಾಲಯಗಳಲ್ಲಿ ಆ ಕಾಯ್ದೆಯನ್ನು ಹಿಂಪಡೆಯಲಾಯಿತು. ಸದ್ಯ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ.