ದುಬೈ ಅಂತಾರಾಷ್ಟ್ರೀಯ ಎಕ್ಸ್ ಪೋ: ಒಮಾನ್ ಪೆವಿಲಿಯನ್ ಗೆ ಚಿನ್ನದ ಪದಕ

Prasthutha|

ಮಸ್ಕತ್: ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಎಕ್ಸ್ ಪೋ -2020ಯಲ್ಲಿ  ಒಮಾನ್ ನ ಪೆವಿಲಿಯನ್ ಚಿನ್ನದ ಪದಕವನ್ನು ಬಹುಮಾನವನ್ನು ಗೆದ್ದಿದೆ.

- Advertisement -

ದುಬೈ ಎಕ್ಸ್ಪೋ 2020ರ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 30ರಂದು ಈ ಘೋಷಣೆ ಮಾಡಲಾಗಿದೆ.

ಸುಲ್ತಾನೇಟ್ ಆಫ್ ಒಮಾನ್ ನ ಆಕರ್ಷಕ ಪೆವಿಲಿಯನ್, ದುಬೈನಲ್ಲಿ ವಿಶ್ವಾದ್ಯಂತ ಸುಮಾರು 191 ದೇಶಗಳ ಸಂದರ್ಶಕರನ್ನು 182 ದಿನಗಳ ಕಾಲ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ಕನೆಕ್ಟಿಂಗ್ ಮೈಂಡ್ಸ್ ಮತ್ತು ಕ್ರಿಯೇಟಿಂಗ್ ದಿ ಫ್ಯೂಚರ್’ ಎಂಬ ಘೋಷಣೆಯಡಿಯಲ್ಲಿ ನಡೆಸಿದ ಈ ಪೆವಿಲಿಯನ್ ದೇಶ-ವಿದೇಶದ ಜನರಿಗೆ ಹೊಸ ಅನುಭವವನ್ನು ನೀಡಿತ್ತು..

- Advertisement -

ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಪ್ರಚಾರ ಸಚಿವಾಲಯದ ಸಲಹೆಗಾರ ಮತ್ತು ಎಕ್ಸ್ಪೋ 2020 ಓಮಾನ್ನ ಕಮಿಷನರ್ ಜನರಲ್ ಮೊಹ್ಸಿನ್ ಬಿನ್ ಖಮೀಸ್ ಅಲ್ ಬಲೂಶಿ, ಮಾನವೀಯತೆ, ಅನ್ಯೋನ್ಯತೆಯ ಸವಾಲುಗಳನ್ನು ಸುಲಭವಾಗಿ  ಎದುರಿಸಲು ಮತ್ತು ಈ ವಿಷಯವಾಗಿ ದೇಶ-ವಿದೇಶದ ಜನರೊಡನೆ ತಲುಪಲು ಸುಲ್ತಾನೇಟ್ ಆಫ್ ಒಮಾನ್ ಈ ಈವೆಂಟ್ನಲ್ಲಿ ಪಾಳ್ಗೊಂಡಿತ್ತು ಮತ್ತು ಬಹುತೇಕ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡುತ್ತಾ ಗೋಲ್ಡನ್ ಬಹುಮಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

Join Whatsapp