ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Prasthutha|

ಶೃಂಗೇರಿ: ಫಸಲು ನಾಶವಾಗಿ, ಸಾಲಬಾಧೆ ತಾಳಲಾರದೆ ರೈತರೊಬ್ಬರು ಅತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪದಲ್ಲಿ ನಡೆದಿದೆ.

- Advertisement -


ಕೊಪ್ಪ ತಾಲೂಕು ಅಗಳಗಂಡಿ ಗ್ರಾಮದ ಕಕ್ಕದ್ದೆ ರವೀಂದ್ರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಜಯಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 1.5 ಲಕ್ಷ ಹಾಗೂ ವ್ಯಕ್ತಿಯೊಬ್ಬರಿಂದ ಸಾಲ ಪಡೆದಿದ್ದರು.


ಸಾಲ ಬಾಧೆ ತಾಳಲಾರದೆ 2 ದಿನಗಳ ಹಿಂದೆ ರವೀಂದ್ರ ವಿಷ ಸೇವಿಸಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ರೈತನಿಗೆ ಇಬ್ಬರು ಮಕ್ಕಳು ಇದ್ದಾರೆ.

- Advertisement -


ಮೂರು ಬಾರಿ ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಔಷಧಿ ಸಿಂಪಡಿಸಿದ್ದು, ಆದರೆ ರೋಗ ನಿಯಂತ್ರಣಕ್ಕೆ ಬಂದಿರಲಿಲ್ಲ. ರೋಗದಿಂದ ಅಡಿಕೆ ಮರಗಳು ಧರೆಗುರುಳುತ್ತಿವೆ, ತೀವ್ರವಾಗಿ ಹಬ್ಬುತ್ತಿರುವ ಎಲೆ ಚುಕ್ಕಿ ರೋಗಕ್ಕೆ ಬೇಸತ್ತು ರೈತ ರವೀಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp