‘ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್’ ಅಳವಡಿಸಲು ನೀಡಿದ ಗಡುವು ವಿಸ್ತರಿಸಲು ಆಗ್ರಹಿಸಿ ಜಿಲ್ಲಾಧಿಕಾರಿಯನ್ನು ಭೇಟಿಯಾದ SDTU ಆಟೋ ಯೂನಿಯನ್ ನಿಯೋಗ

Prasthutha|

ಮಂಗಳೂರು: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದಂತೆ ವಾಹನಗಳಿಗೆ ಗರಿಷ್ಠ ಭದ್ರತೆ ಮತ್ತು ಸುರಕ್ಷತೆ ದ್ರಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಎಚ್.ಎಸ್.ಆರ್.ಪಿ (ಹೈ ಸೆಕ್ಯೂರಿಟಿ ರಿಜಿಸ್ಟರೇಷನ್ ಪ್ಲೇಟ್) ಅಳವಡಿಸಲು ಫೆಬ್ರವರಿ 17 ಕೊನೆಯ ದಿನ ನಿಗಧಿ ಪಡಿಸಿ ಸರಕಾರ ಆದೇಶ ನೀಡಿದ್ದು ಈ ಗಡುವು ವಿಸ್ತರಿಸ ಬೇಕು ಮತ್ತು ನಿಗಧಿ ಪಡಿಸಿದ ಶುಲ್ಕ ಕಡಿತಗೊಳಿಸಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ನಿಯೋಗ ಭೇಟಿ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿತು

- Advertisement -

ಸರ್ವರ್ ನಿಧಾನಗತಿ ಮತ್ತು ಇತರ ತಾಂತ್ರಿಕ ಕಾರಣಗಳಿಂದ ಬಹುತೇಕ ವಾಹನಗಳಿಗೆ ಎಚ್.ಎಸ್.ಆರ್.ಪಿ ಅಳವಡಿಸಲು ಸಾಧ್ಯವಾಗಲಿಲ್ಲ ಇದಕ್ಕಾಗಿ ಪಾವತಿ ಮಾಡಬೇಕಾದ ಹಣ ಕೂಡಾ ಟ್ಯಾಕ್ಸಿ, ರಿಕ್ಷಾ ಚಾಲಕರಿಗೆ ಹೊರೆಯಾಗಿದೆ. ರಿಕ್ಷಾ, ಟ್ಯಾಕ್ಸಿ ಇತ್ಯಾದಿ ಚಾಲಕರ ಒಂದು ದಿನದ ಗಳಿಕೆಯ ಹಣ ಇದಕ್ಕಾಗಿ ವ್ಯಯ ಮಾಡ ಬೇಕಾದ ಅನಿವಾರ್ಯತೆಯಿಂದಲೂ, ದಿನ ಬಳಕೆಯ ಇತ್ಯಾದಿ ಅಗತ್ಯ ವಸ್ತುಗಳ ಖರೀದಿಯ ಹೊರೆಯೊಂದಿಗೆ ಶ್ರಮಿಕರಾದ ಚಾಲಕ ದಿನದೂಡುವಾಗ ಎಚ್.ಎಸ್.ಆರ್.ಪಿ ಗಾಗಿ ಹಣ ವ್ಯಯ ಮಾಡಲು ಚಾಲಕ ಹಿಂದೇಟು ಹಾಕಲು ಪ್ರಮುಖ ಕಾರಣವಾಗಿರಲೂಬಹುದು. ಮಾತ್ರವಲ್ಲ ವಾಹನ ಮಾಲೀಕರಿಗೆ ಈ ಬಗ್ಗೆ ಜಾಗೃತಿ ಮತ್ತು ಸಾಕಷ್ಟು ಮಾಹಿತಿ ಕೊರತೆಯ ಕಾರಣಗಳಿಂದಲೂ ನಿಗದಿತ ದಿನಾಂಕದೊಳಗೆ ಎಚ್.ಎಸ್.ಆರ್.ಪಿ ಅಳವಡಿಸಲು ವಾಹನ ಮಾಲಕರು ಹಿಂದೇಟು ಹಾಕಲು ಕಾರಣವಾಗಿದೆ ಈ ಕಾರಣಗಳಿಂದ ಎಚ್.ಎಸ್. ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ಸಮಯಾವಕಾಶ ವಿಸ್ತರಿಸಬೇಕು, ನಿಗದಿ ಪಡಿಸಿದ ಶುಲ್ಕ ಕಡಿತಗೊಳಿಸ ಬೇಕು ಈ ಬಗ್ಗೆ ಸಾರ್ವಜನಿಕವಾಗಿ ಸರಕಾರ ಜಾಗೃತಿ ಮೂಡಿಸಿ ಮಾಹಿತಿ ನೀಡಲು ಪ್ರಯತ್ನಿಸಬೇಕು ಎಂದು ಸರಕಾರಕ್ಕೆ ಮನವಿಯಲ್ಲಿ ತಿಳಿಸಲಾಗಿದೆ.
ಆಟೋ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ, ಕಾರ್ಯದರ್ಶಿ ಫಿರೋಝ್ ಪಡುಬಿದ್ರೆ, ಕೋಶಾಧಿಕಾರಿ ಶರೀಫ್ ಕುತ್ತಾರ್, ಸುರತ್ಕಲ್ ಏರಿಯಾ ಅಧ್ಯಕ್ಷ ಕಬೀರ್ ಸುರತ್ಕಲ್, ಅನ್ಸಾರ್ ಉಳಾಯಿ ಬೆಟ್ಟು ಮತ್ತಿತರರು ನಿಯೋಗದಲ್ಲಿದ್ದರು



Join Whatsapp