ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌’ಗಳು ಸಾವು

Prasthutha|

- Advertisement -

ಭೋಪಾಲ್: ತರಬೇತಿ ವಿಮಾನ ಪತನವಾಗಿ ಇಬ್ಬರು ಪೈಲಟ್‌’ಗಳು ಮೃತಪಟ್ಟಿರುವ ಘಟನೆ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ನಡೆದಿದೆ.

ಹಿಮಾಚಲ ಪ್ರದೇಶದ ಕ್ಯಾಪ್ಟನ್ ಮೋಹಿತ್ ಠಾಕೂರ್ ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಗುಜರಾಥ್‌ನ ವಿ.ಮಹೇಶ್ವರಿ ಎಂಬುವವರು ಮೃತಪಟ್ಟವರು.

- Advertisement -

ನ್ಯಾಷನಲ್ ಫ್ಲೈಯಿಂಗ್ ಟ್ರೈನಿಂಗ್ ಇನ್‌ ಸ್ಟಿಟ್ಯೂಟ್ (ಎನ್‌ಎಫ್‌ಟಿಐ) ಗೆ ಸೇರಿದ ಡೈಮಂಡ್ ಡಿಎ-40 ತರಬೇತಿ ವಿಮಾನ ಮಹಾರಷ್ಟ್ರದ ಗೋಂದಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದು, ಸುಮಾರು 40 ಕಿಲೋಮೀಟರ್ ದೂರದ ಬಾಲಾಘಾಟ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.

Join Whatsapp