ಪುಟ್ಟ ಮಕ್ಕಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Prasthutha|

- Advertisement -

ದಾದರ್: ಮಗುವೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಈತ ಹೈದರಾಬಾದ್‌ನಲ್ಲಿ ಖರೀದಿಸಿದ್ದ ಮಗುವನ್ನು ಮಾರಾಟ ಮಾಡಲು ನಾಸಿಕ್ ಗೆ ಬಂದು ಅಲ್ಲಿ ಮಾರಾಟ ಮಾಡಲು ವಿಫಲವಾದ ನಂತರ ಮುಂಬೈಗೆ ಹಿಂದಿರುಗುತ್ತಿದ್ದನು. ಈ ವೇಳೆ ದಾದರ್ ರೈಲು ನಿಲ್ದಾಣದಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕೆಲ ದಿನಗಳ ತಮ್ಮ ಮಗು ನಾಪತ್ತೆಯಾಗಿರುವ ಬಗ್ಗೆ ಮಹಾರಾಷ್ಟ್ರದ ಪೋಷಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ತನಿಖೆ ಆರಂಭಿಸಿದ್ದ ಪೊಲೀಸರು, ಮಕ್ಕಳ ಕಳ್ಳ ಸಾಗಣೆ ಏಜೆಂಟ್ ಸಮಾಧಾನ್ ಪಾಟೀಲ್​ ಎಂಬಾತನನ್ನು ಪತ್ತೆ ಹಚ್ಚಿದ್ದಾರೆ. ಆತನಿಗೆ ಬಲೆ ಬೀಸಿ ಬಂಧಿಸಿದ್ದಾರೆ. ಅತನಿಂದ ದೊರೆತ ಮಾಹಿತಿ ಮೇರೆಗೆ ಪೊಲೀಸರು ಈ ದಂಧೆಯ ಇತರ ಐವರನ್ನು ಕೂಡ ಬಂಧಿಸಿದ್ದಾರೆ.

- Advertisement -

ಸಮಾಧಾನ್ ಪಾಟೀಲ್ ನಾಸಿಕ್‌ನಲ್ಲಿ ಮಕ್ಕಳ ಮಾರಾಟ ಏಜೆಂಟ್ ಆಗಿದ್ದಾನೆ. ಆಗಾಗ ರೈಲಿನಲ್ಲಿ ಹೈದರಾಬಾದ್‌ಗೆ ಬರುತ್ತಿದ್ದನು. ಇಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಗರ್ಭಿಣಿಯರ ಮಾಹಿತಿ ಸಂಗ್ರಹಿಸುತ್ತಿದ್ದನು. ಹೆರಿಗೆಯ ನಂತರ ಮಗುವಿನ ಪೋಷಕರು, ಕುಟುಂಬದ ಸದಸ್ಯರೊಂದಿಗೆ ಮಗು ಮಾರಾಟ ಮಾಡಿದರೆ ಲಕ್ಷಗಟ್ಟಲೆ ಹಣ ನೀಡುವುದಾಗಿ ಆಮಿಷ ಒಡ್ಡುತ್ತಿದ್ದನು ಎಂಂದು ಪೊಲೀಸ್​ ತನಿಖೆಯಲ್ಲಿ ತಿಳಿದು ಬಂದಿದೆ.

ಮಕ್ಕಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೆಲವೊಮ್ಮೆ ಮಕ್ಕಳನ್ನು ಕಿಡ್ನಾಪ್ ಮಾಡುತ್ತಿದ್ದರು ಎಂಬುವುದು ಕೂಡ ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.

ಮಕ್ಕಳ ದತ್ತು ಪಡೆಯುವುದು ಕಾನೂನು ಪ್ರಕಾರ ಕಠಿಣವಾದ ಕಾರಣ ಮಕ್ಕಳಿಲ್ಲದ ಕೆಲವು ದಂಪತಿ ಅಡ್ಡಹಾದಿ ಮೂಲಕ ಖರೀದಿಸುತ್ತಿದ್ದಾರೆ. ಇದನ್ನೇ ದಂಧೆಕೋರರು ಬಂಡವಾಳ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.



Join Whatsapp