6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೂ ಕೋವ್ಯಾಕ್ಸಿನ್ ಬಳಕೆಗೆ DCGI ಅನುಮತಿ

Prasthutha|

ನವದೆಹಲಿ:  ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಮತ್ತೊಮ್ಮೆ ಏರಿಕೆಯನ್ನು ಕಾಣುತ್ತಿದ್ದಂತೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI)  ಮಂಗಳವಾರ 6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ‘ನ ಕೋವ್ಯಾಕ್ಸಿನ್’ಗೆ ನಿರ್ಬಂಧಿತ ತುರ್ತು ಬಳಕೆಯ ಅನುಮೋದನೆಯನ್ನು ನೀಡಿದೆ.

- Advertisement -

6 ರಿಂದ 12 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಎಮರ್ಜೆನ್ಸಿ ಬಳಕೆಗೆ ಅನುಮತಿಯನ್ನು ಇಂದು ಡ್ರಗ್ಸ್​ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನೀಡಿದೆ. ಏಪ್ರಿಲ್ 21 ರಂದು, DCGI ತಜ್ಞರ ಸಮಿತಿ (ಎಸ್ಇಸಿ) ಭಾರತ್ ಬಯೋಟೆ ಗೆ 2-12 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ನೀಡುವ ಬಗ್ಗೆ ಹೆಚ್ಚುವರಿ ಡೇಟಾವನ್ನು ಒದಗಿಸುವಂತೆ ಕೇಳಿತ್ತು. ಆ ವೇಳೆ, ಸಮಿತಿಯು 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ  Biological E’sನ ಕೋವಿಡ್ -19 ಲಸಿಕೆ Corbevax ತುರ್ತು ಬಳಕೆಯ ಅನುಮೋದನೆ ನೀಡಲು ಶಿಫಾರಸು ಮಾಡಿತ್ತು.

ಕಳೆದ 2021 ರ ಡಿಸೆಂಬರ್ ನಲ್ಲಿ 12ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ತುರ್ತು ಬಳಕೆಗಾಗಿ ಕೋವ್ಯಾಕ್ಸಿನ್ ಅನ್ನು ಸಮಿತಿ ಅನುಮೋದಿಸಿತ್ತು.



Join Whatsapp