ದಾವಣಗೆರೆ: ಪಿಯುಸಿ ವಿದ್ಯಾರ್ಥಿ ನಿಗೂಢ ಸಾವು

Prasthutha|

ದಾವಣಗೆರೆ: ನಗರದ ಪಿಸಾಳೆ ಕಾಂಪೌಂಡ್ ನಲ್ಲಿ ಪಿಯುಸಿ ವಿದ್ಯಾರ್ಥಿ ನಿಗೂಢ ಸಾವು ಕಂಡಿರುವ ಘಟನೆ ಜರುಗಿದೆ.

- Advertisement -

ಮಿಥುನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ ದುರ್ದೈವಿ.ಈತ ಸತೀಶ್ ಪಿಸಾಳೆ ಎಂಬುವವರ ಪುತ್ರ. ಮಿಥುನ್ ಖಾಸಗಿ ಶಾಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.ಇಂದು ಗಣಿತ ವಿಷಯದ ಪರೀಕ್ಷೆ ಬರೆಯಬೇಕಾಗಿತ್ತು.ಆದರೆ ಮಿಥುನ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

- Advertisement -

ಶ್ವಾನದಳದಿಂದ ತಪಾಸಣೆ ನಡೆಸಲಾಗುತ್ತಿದೆ.

Join Whatsapp