ಬಜೆಟ್ ನಲ್ಲಿ ಸಮರ್ಪಕ ಅನುದಾನಕ್ಕೆ ಒತ್ತಾಯಿಸಿ ದಸಂಸ ಒಕ್ಕೂಟದಿಂದ ಹಕ್ಕೊತ್ತಾಯ ಧರಣಿ

Prasthutha|

ಬೆಂಗಳೂರು: SP/TSP ಕಾಯ್ದೆಯ ಅನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದಸಂಸ ಒಕ್ಕೂಟದಿಂದ ಹಕ್ಕೊತ್ತಾಯ ಧರಣಿ ಇಂದು  ಬೆಂಗಳೂರು ಮೌರ್ಯ ಸರ್ಕಲ್ ಬಳಿ ನಡೆಯಿತು.

- Advertisement -

ಈ ಧರಣಿಯಲ್ಲಿ ದಲಿತ ಸಂಘಟನೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ದಲಿತ ಸಂಘಟನೆಯ ಮುಖಂಡ ಮಾವಳ್ಳಿ ಶಂಕರ ಮಾತನಾಡಿ, ಕಳೆದ 2-3 ವರ್ಷಗಳಿಂದ ದಲಿತ ವಿದ್ಯಾರ್ಥಿಗಳಿಗೆ ಬರಬೇಕಿದ್ದ ವಿದ್ಯಾರ್ಥಿ ವೇತನದ ಹಣವನ್ನು ಸರಿಯಾಗಿ ಪಾವತಿ ಮಾಡದೆ ಮೆಡಿಕಲ್, ಇಂಜಿನಿಯರಿಂಗ್ , ಉನ್ನತ ಶಿಕ್ಷಣ  ಮತ್ತು ಪ್ರತಿಷ್ಠಿತ ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಆತಂಕ ಸ್ಥಿತಿಯನ್ನು ಎದುರಿಸಬೇಕಾಯಿತು. ದಲಿತ ವಿದ್ಯಾರ್ಥಿಗಳ ವಿವಿಧ ಹಂತದ ವೇತನ ಆಯಾ ವರ್ಷ ಸರಿಯಾದ ಸಮಯಕ್ಕೆ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪಿಸಿದರು. 

- Advertisement -

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಹೂಸ ಶಿಕ್ಷಣ ನೀತಿ (ಎನ್ ಇಪಿ) ಯನ್ನು ಜಾರಿಗೊಳಿಸಿ ಆರೆಸ್ಸೆಸ್ ನ ಹಿಡನ್ ಅಜೆಂಡಾಗಳಿಗನುಗುಣವಾಗಿ ಆಡಳಿತ ನಡೆಸುತ್ತಿದೆ. ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಹಳ್ಳಿಗಾಡಿನ ಶೂದ್ರ ಸಮುದಾಯಗಳಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೊನೆಯ ವರ್ಷದ ಬಜೆಟ್ ನಲ್ಲಿ SP/TSP ಕಾಯ್ದೆಯಂತೆ SC/ST ಜನಸಂಖ್ಯೆ ಮತ್ತು ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಸುಮಾರು 30 ಸಾವಿರ ಕೋಟಿ ರೂ.ಗಳನ್ನು ದಲಿತ ಅಭಿವೃದ್ಧಿಗಾಗಿ ಮೀಸಲಿಡಲಾಗಿತ್ತು. ಎರಡು ವರ್ಷಗಳ ಹಿಂದೆ ಅನೈತಿಕವಾದ ಶಾಸಕರ ಖರೀದಿ ಮೂಲಕ ಅಧಿಕಾರಕ್ಕೆ ಬಂದ ಬಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ಕಾಯ್ದೆ ಪ್ರಕಾರ ಹಣ ಇಡದೆ ಭಾರಿ ಕಡಿತಗೊಳಿಸಿದರು ಎಂದು ಹೇಳಿದರು.

ಈ ಧರಣಿ ಒಕ್ಕೂಟದ ಮುಖಂಡರಾದ ಎನ್.ವೆಂಕಟೇಶ್  ಎನ್. ಮುನಿಸ್ವಾಮಿ ಹಾಗೂ ಮಾವಳ್ಳಿ ಶಂಕರ್ ಉಪಸ್ಥಿತರಿದ್ದರು

Join Whatsapp