ಕೋವಿಡ್ 19 ಲಾಕ್ ಡೌನ್ ನಂತರ ದಲಿತರು, ಮುಸ್ಲಿಮರು ಹೆಚ್ಚು ಹಸಿವಿನಿಂದ ಬಳಲಿದವರು : ಸಮೀಕ್ಷೆ

Prasthutha|

ನವದೆಹಲಿ : ಕೋವಿಡ್ – 19 ಲಾಕ್ ಡೌನ್ ಸಮಯದಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ನಿರ್ಬಂಧಗಳಿದ್ದ ವೇಳೆ ದೇಶದ ಜನಸಂಖ್ಯೆಯ ಇತರರಿಗಿಂತ ದಲಿತರು, ಮುಸ್ಲಿಮರು ಹೆಚ್ಚು ಹಸಿವಿನಿಂದ ಬಳಲಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹಸಿವಿನ ವಿಷಯದಲ್ಲಿ ಈ ರೀತಿಯ ಸಮೀಕ್ಷೆಯೊಂದು ಇದೇ ಮೊದಲ ಬಾರಿ ಮಾಡಲಾಗಿದೆ.

- Advertisement -

ಲಾಕ್ ಡೌನ್ ನಂತರ ದೇಶದ ನಾಲ್ವರು ದಲಿತರಲ್ಲಿ ಓರ್ವ ದಲಿತನಿಗೆ ಮತ್ತು ನಾಲ್ವರು ಮುಸ್ಲಿಮರಲ್ಲಿ ಓರ್ವ ಮುಸ್ಲಿಮನಿಗೆ ಆಹಾರ ಪಡೆಯುವಲ್ಲಿ ತಾರತಮ್ಯ ಎದುರಿಸುತ್ತಿದ್ದಾನೆ ಎಂದು ಸಮೀಕ್ಷೆ ತಿಳಿಸಿದೆ. “ರೈಟ್ ಟು ಫುಡ್’ ಅಭಿಯಾನ ನಡೆಸಿದ ಕೋವಿಡ್ ನಂತರದ ಹಸಿವು ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇತರ ವರ್ಗಗಳಲ್ಲಿ ಹತ್ತು ಮಂದಿಯಲ್ಲಿ ಒಬ್ಬನಿಗೆ ಆಹಾರ ಪಡೆಯುವುದು ಕಷ್ಟವಾಗಿದೆ.

11 ರಾಜ್ಯಗಳ ಶೇ.45 ಮಂದಿ ಆಹಾರ ಕೊಂಡುಕೊಳ್ಳಲು ಹಣದ ಸಮಸ್ಯೆ ಎದುರಿಸಿದ್ದು, ಆಹಾರ ಕೊಂಡುಕೊಳ್ಳಲೂ ಅವರು ಸಾಲ ಮಾಡಿದ್ದಾರೆ. ಇದು ಲಾಕ್ ಡೌನ್ ನಂತರದ ಬಳಿಕ ಏರಿಕೆಯಾಗಿದೆ. ಶೇ.74ರಷ್ಟು ದಲಿತರು ತಾವು ಸೇವಿಸುವ ಆಹಾರದ ಪ್ರಮಾಣದಲ್ಲಿ ಕಡಿತ ಮಾಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

- Advertisement -

ಶೇ.56ರಷ್ಟು ಮಂದಿ ಲಾಕ್ ಡೌನ್ ಗೂ ಮೊದಲು ಯಾವತ್ತೂ ತಮ್ಮ ಊಟ ತಪ್ಪಿಸಿಕೊಂಡಿಲ್ಲ. ಆದರೆ, ಲಾಕ್ ಡೌನ್ ನಂತರ ಏಳರಲ್ಲಿ ಒಬ್ಬ ಪ್ರತಿದಿನ ಅಥವಾ ಕೆಲವೊಮ್ಮೆ ಊಟ ತಪ್ಪಿಸಿಕೊಳ್ಳುವಂತಾಗಿದೆ ಎಂದು ಸಮೀಕ್ಷೆ ತಿಳಿಸಿದೆ.



Join Whatsapp