ಔತಣಕೂಟದಲ್ಲಿ ಊಟ ಮುಟ್ಟಿದ್ದಕ್ಕೆ ದಲಿತ ಯುವಕನ ಥಳಿಸಿ ಕೊಂದ ಜಾತಿವಾದಿ ಉಗ್ರರು

Prasthutha|

ಭೋಪಾಲ : ಔತಣ ಕೂಟವೊಂದರಲ್ಲಿ ಊಟ ಮುಟ್ಟಿದ್ದಕ್ಕೆ ದಲಿತ ಯುವಕನೊಬ್ಬನನ್ನು ಜಾತಿವಾದಿ ಉಗ್ರರು ಥಳಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಬುಂದೇಲ್ ಖಂಡ ಪ್ರಾಂತ್ಯದಲ್ಲಿ ವರದಿಯಾಗಿದೆ.

ಛಾತರ್ ಪುರದ ಕಿಶನ್ ಪುರ ಎಂಬ ಗ್ರಾಮದಲ್ಲಿ ಔತಣ ಕೂಟವೊಂದನ್ನು ಆಯೋಜಿಸಲಾಗಿತ್ತು. ಅಲ್ಲಿ ಸ್ವಚ್ಛತೆಯ ಕೆಲಸಕ್ಕಾಗಿ ದೇವರಾಜ್ ಅನುರಾಗಿ ಎಂಬ 25ರ ಹರೆಯದ ಯುವಕನನ್ನು ಭೂರಾ ಸೋನಿ ಮತ್ತು ಸಂತೋಷ್ ಪಾಲ್ ಎಂಬವರು ಕರೆಸಿದ್ದರು.

- Advertisement -

ಕೆಲಸ ಮುಗಿಸಿದ ದೇವರಾಜ್ ತಾನೇ ಊಟ ಬಡಿಸಿಕೊಂಡು ಊಟ ಮಾಡುತ್ತಿರುವುದನ್ನು ಗಮನಿಸಿದ ಜಾತಿವಾದಿ ಭೂರಾ ಮತ್ತು ಸಂತೋಷ್ ಕೋಪೋದ್ರಿಕ್ತರಾಗಿ ದೇವರಾಜ್ ಮೇಲೆ ದಾಳಿ ನಡೆಸಿದ್ದಾರೆ. ಇಬ್ಬರು ಜಾತಿವಾದಿ ಉಗ್ರರ ದಾಳಿಗೆ ತುತ್ತಾದ ದೇವರಾಜ್ ಸಾವಿಗೀಡಾಗಿದ್ದಾನೆ.

ಆರೋಪಿಗಳಾದ ಭೂರಾ ಮತ್ತು ಸಂತೋಷ್ ತಲೆ ಮರೆಸಿಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಕೊಲೆ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಭೂರಾ ಈಗಾಗಲೇ ಕ್ರಿಮಿನಲ್ ಹಿನ್ನೆಲೆಯುಳ್ಳವನೆಂದು ವರದಿಗಳು ತಿಳಿಸಿವೆ.  

- Advertisement -