ಉತ್ತರ ಪ್ರದೇಶ | ದಿಟ್ಟಿಸಿ ನೋಡಿದ ನೆಪದಲ್ಲಿ ದಲಿತ ಯುವಕನಿಗೆ ಪೊಲೀಸರಿಂದ ಚಿತ್ರಹಿಂಸೆ

Prasthutha|

ಉತ್ತರ ಪ್ರದೇಶ: ತಮ್ಮನ್ನು ದಿಟ್ಟಿಸಿ ನೋಡಿದ್ದಾನೆ ಎಂಬ ನೆಪವೊಡ್ಡಿ ದಲಿತ ಯುವಕನನ್ನು ಬಂಧಿಸಿ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌ ಎಂಬಲ್ಲಿ ನಡೆದಿದೆ.

- Advertisement -

ಸುಭಾಷ್ ಎಂಬಾತನೇ ಪೊಲೀಸರಿಂದ ಹಲ್ಲೆಗೊಳಗಾದ ದಲಿತ ಯುವಕನಾಗಿದ್ದು, ನೆರೆಹೊರೆಯವರ ನಡುವಿನ ಜಗಳವನ್ನು ವೀಕ್ಷಿಸಲು ಹೋಗಿದ್ದ ವೇಳೆ ಪೊಲೀಸರು ಅಮಆನುಷವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶ ಪೊಲೀಸರು ಯುವಕನಿಗೆ ಮೂರನೇ ಹಂತದ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ. ಪೊಲೀಸರು ತನ್ನ ಎದುರಲ್ಲೇ ಆತನಿಗೆ ಚರ್ಮದ ಬೆಲ್ಟ್’ನಿಂದ ಹಲ್ಲೆ ನಡೆಸಿದ್ದು, ಈ ವೇಳೆ ಆತ ಮೂರ್ಛೆ ಹೋಗಿದ್ದನು ಎಂದು ಸಂತ್ರಸ್ತನ ತಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

ದಲಿತ ಯುವಕನಿಗೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಸದ್ಯ ಸಂತ್ರಸ್ತ ಸುಭಾಷ್ ನಗರದ ಲೋಕಬಂಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Join Whatsapp