ಉತ್ತರಪ್ರದೇಶ: ದಲಿತ ವಿದ್ಯಾರ್ಥಿನಿಯ ಶವ ಪತ್ತೆ; ಕೊಲೆ ಶಂಕೆ

Prasthutha|

ಲಕ್ನೋ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ದಲಿತ ಬಾಲಕಿಯ ಮೃತದೇಹ ಪತ್ತೆಯಾಗಿದೆ.

- Advertisement -

10 ನೇ ತರಗತಿ ವಿದ್ಯಾರ್ಥಿನಿಯಾದ ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಇದು ಜಾತಿ ಆಧಾರಿತ ಕೊಲೆ ಎಂದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಬಾಲಕಿ ತನ್ನ ಗ್ರಾಮದಿಂದ ಹತ್ತಿರದ ಹಳ್ಳಿಗೆ ಟ್ಯೂಷನ್ ತರಗತಿಗಾಗಿ ಹೋಗಿದ್ದಳು. ದಾರಿ ಮಧ್ಯೆ ತಲೆಗೆ ಗಂಭೀರ ಹಲ್ಲೆ ನಡೆಸಿ ಕೊಲ್ಲಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

- Advertisement -

ಬಾಲಕಿ ಸಾವಿನ ವಿಷಯ ತಿಳಿದ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.



Join Whatsapp