ಶಿಕ್ಷಕರ ಜಾತಿ ಹಿಂಸೆ, ಕಿರುಕುಳ: ನೇಣಿಗೆ ಶರಣಾದ ದಲಿತ ಬಾಲಕ

Prasthutha|

ಭೋಪಾಲ್: ಶಿಕ್ಷಕರೊಬ್ಬರ ಜಾತಿ ಹಿಂಸೆಗೆ ನೊಂದು ದಲಿತ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.

- Advertisement -

ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಡ್ಕುರಿ ಗ್ರಾಮದ ಚಿರ್ಹಟ್ ಸಾರಾ ನವೋದಯ ಶಾಲೆಯ ಎಂಟನೆಯ ತರಗತಿಯ ವಿದ್ಯಾರ್ಥಿ ಅಮಿತ್ ಪ್ರಜಾಪತಿ ನೇಣಿಗೆ ಶರಣಾದ ಬಾಲಕ.

ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕ  ಅಮಿತ್  ನ ತಂದೆ “ನವೋದಯ ಶಾಲೆಯಲ್ಲಿ ಕಲಿಯುತ್ತಿದ್ದ ನನ್ನ ಮಗನ ಕ್ಲಾಸ್ ಟೀಚರ್ ಮತ್ತು ಅಲ್ಲಿನ ಹೌಸ್ ಮಾಸ್ಟರ್ ಅಜಿತ್ ಪಾಂಡೆಯವರು ಅಮಿತ್ ನಿಗೆ ಜಾತಿ ನಿಂದನೆ ಮಾಡಿ, ಕಿರುಕುಳ ನೀಡುತ್ತಿದ್ದರು. ನೀನು ಕೆಳ ಜಾತಿಯಿಂದ ಬಂದಿದ್ದೀಯಾ, ನಿನಗೆ ವಿದ್ಯೆ ಕಲಿಯುವ ಹಕ್ಕು ಇಲ್ಲ ಎಂದು ನನ್ನ ಮಗನಲ್ಲಿ ಅಜಿತ್ ಪಾಂಡೆ ಹೇಳುತ್ತಿದ್ದರಂತೆ. ನಾನೇ ಒಮ್ಮೆ ಹೋಗಿ, ಅವರ ಜೊತೆಗೆ ಈ ವಿಷಯವಾಗಿ ಮಾತನಾಡಿದರೂ ಜಾತೀಯ ಶೋಷಣೆ, ಕಿರುಕುಳ ನಿಲ್ಲಲಿಲ್ಲ” ಎಂದು ಅಲ್ಹಾ  ತನ್ನ ನೋವು ತೋಡಿಕೊಂಡಿದ್ದಾರೆ.

- Advertisement -

 “ನನಗೆ ಹುಶಾರಿಲ್ಲ, ಮನೆಗೆ ಬರುತ್ತೇನೆ ಎಂದು ನನ್ನ ಮಗ ಡಿಸೆಂಬರ್ 22ರಂದು ಕರೆ ಮಾಡಿ ನನಗೆ ತಿಳಿಸಿದ. ಆಗ ಆತನ ತಾಯಿ ಮತ್ತು ತಮ್ಮ ಆತನನ್ನು ಕರೆದುಕೊಂಡು ಬರಲು ನವೋದಯ ಶಾಲೆಗೆ ಹೋದರು. ಆದರೆ ಶಾಲೆಯವರು ಮಗನನ್ನು ಕಳುಹಿಸಲು ನಿರಾಕರಿಸಿದರು. ಅಂದು ಮಧ್ಯರಾತ್ರಿ ಇಬ್ಬರು ನನ್ನ ಮಗನನ್ನು ಮನೆಗೆ ಕರೆ ತಂದು ಬಿಟ್ಟು ಹೋದರು ಎಂದು ತಿಳಿಸಿದರು.

“ನಿನ್ನ ಶಿಕ್ಷಕರು  ಹೆತ್ತವರಂತೆಯೇ. ನಿನ್ನ ಒಳ್ಳೆಯದಕ್ಕೇ ಅವರು ಬಯ್ದಿರಬಹುದು” ಎಂದು ಮಗನಿಗೆ ತಿಳಿ ಹೇಳಿದ್ದೆ.ಆದರೆ ಅಜಿತ್ ಪಾಂಡೆ ನನ್ನನ್ನು ಹಿಂಸಿಸಿ  ಕೆಟ್ಟದಾಗಿ ಬಯ್ದಿದ್ದಾರೆ ಎಂದು ಆ ಮೇಲೆ ಶಾಲೆಗೆ ಹಿಂದಿರುಗಲು ಒಪ್ಪಲಿಲ್ಲ. ಜನವರಿ 1ರಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಜಾಪತಿ ತಿಳಿಸಿದರು.

ಆದರೆ ಆತ ಉತ್ತಮವಾಗಿ ಕಲಿತು ಒಳ್ಳೆಯ ಹೆಸರು ಪಡೆಯಬೇಕು ಎಂದಷ್ಟೆ ನಾವು ಬಯ್ಯುತ್ತಿದ್ದೆವು ಎಂದು ಶಾಲೆಯವರು ಸಮಜಾಯಿಷಿ ನೀಡಿದ್ದಾರೆ.

ಆತ್ಮಹತ್ಯೆಗೂ ಮೊದಲು ಬಾಲಕ ಅಮಿತ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ “ನನಗೆ ಗೊತ್ತು, ನಿಮಗೆ ತುಂಬ ಬೇಸರವಾಗಿದೆ. ನಾನು ಈ ನಿರ್ಧಾರಕ್ಕೆ ಏಕೆ ಬಂದೆ ಎಂದರೆ ನಾನು ಆಂತರಿಕವಾಗಿ ಕೊಳಕಾಗಿದ್ದೇನೆ. ನನ್ನ ಕೆಟ್ಟ ಅಭ್ಯಾಸವನ್ನು ಬಿಡಲಾರದವನಾಗಿದ್ದೇನೆ. ನಾನು ನನ್ನ ಮಾಸ್ಟ್ರರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ತುಂಬ ಒತ್ತಡಕ್ಕೊಳಗಾಗಿದ್ದೇನೆ. ನನ್ನ ಗುರೂಜಿ ಇನ್ನೊಂದು ತಪ್ಪಾದರೆ ಕ್ಷಮಿಸಲಾಗದು ಎಂದು ಹೇಳಿದರು. ನಾನೆಣಿಸುತ್ತೇನೆ ತಪ್ಪನ್ನು ಕ್ಷಮಿಸಬಹುದು. ನಾನು ಇದನ್ನೆಲ್ಲ ಅಜಿತ್ ಪಾಂಡೆಯವರಿಗಾಗಿ ಮಾಡಿದ್ದೇನೆ. ನಾನು ಅಂದು ಒಂದು ತಪ್ಪು ಮಾಡಿದೆ, ಅವರು ತುಂಬ ಕೆಟ್ಟದ್ದಾಗಿ ಬಯ್ದರು. ನನ್ನನ್ನು ಬಯ್ದುದಲ್ಲದೆ ನನ್ನ ಹೆತ್ತವರನ್ನು ಭಿಕ್ಷುಕರು ಎಂದು ತೆಗಳಿದರು. ನನ್ನನ್ನು ಮಾದಕ ವ್ಯಸನಿ ಎಂದೂ, ಗಟಾರದ ಹುಳು ಎಂದೂ ಕರೆದರು. ನೀನು ವಿಷ ಕುಡಿದೋ ನೇಣು ಹಾಕಿಕೊಂಡೋ ಸಾಯುತ್ತೀಯಾ ಎಂದೂ ಹೇಳಿದರು. ಪಾಪಾ ದಯವಿಟ್ಟು ನನ್ನ ಸಾವಿನ ಬಳಿಕ ಮದ್ಯಪಾನ ಬಿಟ್ಟುಬಿಡಿ; ಅಜಿತ್ ಪಾಂಡೆ ಬಂಧಿಸಲ್ಪಡುವವರೆಗೆ ಬಿಡಬೇಡಿ.” ಸಾರಿ ಪಾಪಾ ಎಂದು  ಎಂದು ಬರೆದಿದ್ದ.

Join Whatsapp