ಮದುವೆ ಸಮಾರಂಭದಲ್ಲಿ ಕುದುರೆ ಸವಾರಿ ಮಾಡಲು ನಿರ್ಧರಿಸಿದ ದಲಿತನಿಗೆ ಕೊಲೆ ಬೆದರಿಕೆ : ಪೊಲೀಸ್‌ ದೂರು

Prasthutha|

ಮಹೋಬ : ತನ್ನ ವಿವಾಹದಲ್ಲಿ ಕುದುರೆ ಸವಾರಿ ಮಾಡದಂತೆ ದಲಿತ ಯುವಕನೊಬ್ಬನಿಗೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಈ ಬಗ್ಗೆ ದೂರು ನೀಡಿರುವ ಯುವಕ ತನಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

- Advertisement -

ವಿಷಯಕ್ಕೆ ಸಂಬಂಧಿಸಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ತನ್ನ ವಿವಾಹ ಮೆರವಣಿಗೆಯ ವೇಳೆ ಕುದುರೆಯಲ್ಲಿ ಮೆರವಣಿಗೆ ಮಾಡಲು ಅಲಖ್‌ ರಾಮ್‌ ಉದ್ದೇಶಿಸಿದ್ದ. ಆದರೆ, ಇದನ್ನರಿತ ಕೆಲವು ಜಾತಿವಾದಿಗಳು, ವಿವಾಹ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದರೆ, ಕೊಲ್ಲುವುದಾಗಿ ಬೆದರಿಕೆಯೊಡ್ಡಿತಿದ್ದಾರೆ ಎಂದು ರಾಮ್‌ ದೂರಿನಲ್ಲಿ  ತಿಳಿಸಿದ್ದಾನೆ.

ಕಳೆದ ಹಲವಾರು ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಹಳೆಯ ಸಂಪ್ರದಾಯದಂತೆ ವಿವಾಹಗಳಾ ಗುತ್ತಿದ್ದವು. ನಾನು ನನ್ನ ವಿವಾಹದಲ್ಲಿ ಕುದುರೆ ಸವಾರಿ ಮಾಡಲುದ್ದೇಶಿಸಿದ್ದೆ.  ಆದರೆ, ಇತರ ಜಾತಿಯ ಕೆಲವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ರಾಮ್‌ ದೂರಿದ್ದಾನೆ.