ಮಂಗಳೂರು – ಮುಂಬಯಿ ನಡುವೆ ದೈನಂದಿನ ವಿಮಾನಯಾನ ಆರಂಭ

Prasthutha|

ಮಂಗಳೂರು: ಮಂಗಳೂರು – ಮುಂಬಯಿ ನಡುವೆ ಇಂಡಿಗೋ ವಿಮಾನದ ದೈನಂದಿನ ಸಂಚಾರ ರವಿವಾರದಿಂದ ಆರಂಭಗೊಂಡಿದೆ. ಎರಡು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಿದ್ದ ವಿಮಾನ ಇನ್ನು ಪ್ರತಿದಿನ ಸಂಚಾರ ನಡೆಸಲಿದೆ.

- Advertisement -

ವಿಮಾನ ಸಂಖ್ಯೆ 6ಇ-5236 ಮುಂಬಯಿಯಿಂದ ಬೆಳಗ್ಗೆ 8.50ಕ್ಕೆ ಹೊರಟು 10.20ಕ್ಕೆ ಮಂಗಳೂರು ತಲುಪುತ್ತದೆ. 6ಇ -5237 ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಟೇಕಾಫ್ ಆಗಿ ಮಧ್ಯಾಹ್ನ 12.40ಕ್ಕೆ ಮುಂಬಯಿಗೆ ತಲುಪಲಿದೆ. ಈ ಹೊಸ ಸೇವೆಗೆ ಇಂಡಿಗೋ ಏರ್ಬಸ್ ಎ-320 ಮಾದರಿಯ ವಿಮಾನ ಬಳಸುತ್ತಿರುವುದು ವಿಶೇಷವಾಗಿದೆ.

ಮುಂಬಯಿ -ಮಂಗಳೂರು ನಡುವೆ ಮಧ್ಯಾಹ್ನವಿದ್ದ ಇಂಡಿಗೋ ವಿಮಾನಯಾನವನ್ನು ಜೂನ್ ತಿಂಗಳ ಆರಂಭಕ್ಕೆ ಸ್ಥಗಿತಗೊಳಿಸಲಾಗಿದೆ.

- Advertisement -

ಶುಕ್ರವಾರದಿಂದ ವಿಮಾನದ ಪ್ರಾಯೋಗಿಕ ಕಾರ್ಯಾಚರಣೆ ಆರಂಭವಾಗಿತ್ತು. ಜೂನ್ 17 ರಂದು ಹೊರಟ ವಿಮಾನದಲ್ಲಿ ಎರಡು ಶಿಶುಗಳು ಸೇರಿ 88 ಪ್ರಯಾಣಿಕರು ಮುಂಬೈನಿಂದ ಮಂಗಳೂರಿಗೆ ಹಾರಿದರೆ, 99 ಪ್ರಯಾಣಿಕರು ಮಂಗಳೂರಿನಿಂದ ಮುಂಬೈಗೆ ಹಾರಾಟ ನಡೆಸಿದ್ದರು.

ಅದೇ ವೇಳೆ ಹುಬ್ಬಳ್ಳಿ ಮತ್ತು ಮಂಗಳೂರು ನಡುವೆ ಕಳೆದ ಮೇ 1ರಂದು ಆರಂಭಗೊಂಡ ಿಂಡಿಗೋ ವಿಮಾನ ಸಂಚಾರದ ವೇಳಾ ಪಟ್ಟಿಯನ್ನು ಪರಿಷ್ಕರಿಸಲಾಗಿದೆ.

ಹೊಸ ವೇಳಾಪಟ್ಟಿಯಂತೆ ಹುಬ್ಬಳ್ಳಿಯಿಂದ ಸಂಜೆ 7ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 8ಕ್ಕೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 8.20ಕ್ಕೆ ಹೊರಟು ಹುಬ್ಬಳ್ಳಿಗೆ 9.35ಕ್ಕೆ ತಲುಪಲಿದೆ.

ಅಲ್ಲಿಂದ 10 ಗಂಟೆಯ ಸುಮಾರಿಗೆ ಬೆಂಗಳೂರು ತಲುಪಲಿದೆ. ಈ ಹಿಂದೆ ಮಂಗಳೂರಿಗೆ ಸಂಜೆ 6.05ಕ್ಕೆ ತಲುಪಿ 6.35ಕ್ಕೆ ಹುಬ್ಬಳ್ಳಿಗೆ ಹೊರಡುತ್ತಿತ್ತು.

Join Whatsapp