►ಟಾಪ್ 10 ಸಿರಿವಂತರಲ್ಲಿ ಕರ್ನಾಟಕದ 4 ಶಾಸಕರಿಗೆ ಸ್ಥಾನ
ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ಶಾಸಕರ ಸಾಲಿನಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಭಾರತದ ಶ್ರೀಮಂತ ಶಾಸಕರ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಅದರಲ್ಲಿ ಟಾಪ್ 10 ಶ್ರೀಮಂತ ಶಾಸಕರನ್ನು ಹೈಲೇಟ್ ಮಾಡಿದೆ. ಪಟ್ಟಿಯಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದು, ಭಾರತದ ಅತ್ಯಂತ ಶ್ರೀಮಂತ ಶಾಸಕರೆನಿಸಿದ್ದಾರೆ.
ಈಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಕೆ. ಶಿವಕುಮಾರ್ ಭಾರೀ ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಅವರು ಒಟ್ಟು ಆಸ್ತಿ 1,413 ಕೋಟಿ ರೂ. ಇದೆ ಎಂದು ವರದಿ ತಿಳಿಸಿದೆ.
ಟಾಪ್ 10 ಶ್ರೀಮಂತ ಶಾಸಕರು
ಡಿ.ಕೆ. ಶಿವಕುಮಾರ್ (1,413 ಕೋಟಿ ರೂ. ಆಸ್ತಿ – ಕರ್ನಾಟಕದ ಕನಕಪುರ ಕ್ಷೇತ್ರ), ಕೆ.ಹೆಚ್.ಪುಟ್ಟಸ್ವಾಮಿ ಗೌಡ (1,267 ಕೋಟಿ ರೂ. – ಕರ್ನಾಟಕದ ಗೌರಿಬಿದನೂರ್ ಕ್ಷೇತ್ರ), ಪ್ರಿಯಕೃಷ್ಣ (1,156 ಕೋಟಿ ರೂ. – ಕರ್ನಾಟಕದ ಗೋವಿಂದರಾಜನಗರ ಕ್ಷೇತ್ರ), ಎನ್.ಚಂದ್ರಬಾಬು ನಾಯ್ಡು (688 ಕೋಟಿ ರೂ. – ಆಂಧ್ರಪ್ರದೇಶದ ಕುಪ್ಪಂ ಕ್ಷೇತ್ರ), ಜಯಂತಿಭಾಯ್ ಸೋಮಭಾಯ್ ಪಟೇಲ್ (661 ಕೋಟಿ ರೂ. – ಗುಜರಾತ್‌ನ ಮನ್ಸಾ ಕ್ಷೇತ್ರ), ಬಿ.ಎಸ್.ಸುರೇಶ (648 ಕೋಟಿ ರೂ. – ಕರ್ನಾಟಕದ ಹೆಬ್ಬಾಳ್).