ಮಂಗಳೂರು: ಮಾದಕ ದ್ರವ್ಯ ಬೆರೆಸಿದ 100 ಕೆ.ಜಿ ಚಾಕೊಲೇಟ್ ವಶಪಡಿಸಿದ ಪೊಲೀಸರು!

Prasthutha|

ಮಂಗಳೂರು : ಮಾದಕ ದ್ರವ್ಯ ಬೆರೆಸಿದ 100 ಕೆಜಿ ಚಾಕೊಲೇಟ್ ಪೊಲೀಸರು ವಶಪಡಿಸಿರುವ ಬಗ್ಗೆ ವರದಿಯಾಗಿದೆ.  

- Advertisement -

ಜುಲೈ 19 ರಂದು ಬುಧವಾರ ಮಂಗಳೂರು ನಗರದ ಎರಡು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ 100 ಕೆಜಿ ಮಾದಕವಸ್ತು ಬೆರೆಸಿದ ಚಾಕೊಲೇಟ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ನಗರದ ಕಾರ್ ಸ್ಟ್ರೀಟ್‌ನಲ್ಲಿರುವ ಮನೋಹರ್ ಶೇಟ್ ಮಾಲೀಕತ್ವದ ಅಂಗಡಿ ಮತ್ತು ಫಳ್ನೀರ್‌ನಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋಂಕರ್ ಎಂಬಾತನ ಮಾಲೀಕತ್ವದ ಮತ್ತೊಂದು ಅಂಗಡಿ ಮೇಲೆ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ 100 ಕೆಜಿ ಮಾದಕ ದ್ರವ್ಯ ಮಿಶ್ರಿತ ಚಾಕೊಲೇಟ್ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

- Advertisement -

ಇಬ್ಬರ ಅಂಗಡಿ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ‘ಬ್ಯಾಂಗ್ ಚಾಕೊಲೇಟ್’ ಎಂದು ಕರೆಯಲ್ಪಡುವ ಈ ಚಾಕೊಲೇಟ್‌ಗಳನ್ನು ಸುಧಾರಿತ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಫೋರೆನ್ಸಿಕ್ ವರದಿ ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Join Whatsapp