ಮತಾಂತರ ನಿಷೇಧ ಕಾನೂನು | ಸರಕಾರ, ಸಿ.ಟಿ. ರವಿ ಗೊಂದಲದ ಹೇಳಿಕೆ

Prasthutha|

ಬೆಂಗಳೂರು : ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ತಿದ್ದುಪಡಿಯ ಪ್ರಸ್ತಾಪವೇ ಇಲ್ಲ ಎಂದು ಸರಕಾರ ಹೇಳಿದ್ದರೆ, ಇನ್ನೊಂದೆಡೆ ಅದೇ ಸರಕಾರದ ಸಚಿವ ಸಿ.ಟಿ. ರವಿ ಶೀಘ್ರದಲ್ಲೇ ಮತಾಂತರ ನಿಷೇಧ ಕಾನೂನು ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

- Advertisement -

ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಬಿಜೆಪಿಯ ಎನ್. ರವಿಕುಮಾರ್ ಕೇಳಿದ್ದ ಪ್ರಶ್ನೆಗೆ ಸೆ.23ರಂದು ಉತ್ತರಿಸಿದ್ದ ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ, ಅಂತಹ ಪ್ರಸ್ತಾಪವೇ ಇಲ್ಲ ಎಂದು ಉತ್ತರಿಸಿದ್ದರು.

ಆದರೆ, ಕಾರಜೋಳ ಅವರು ಉತ್ತರ ನೀಡಿ ಒಂದು ತಿಂಗಳ ಅಂತರದಲ್ಲಿ ಸಿಟಿ ರವಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದು ಟ್ವೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.