ಬಾಲಿವುಡ್ ನಟ ಫರಾಜ್ ಖಾನ್ ನಿಧನ

ಮುಂಬೈ : ಬಾಲಿವುಡ್ ನಟ ಫರಾಝ್ ಖಾನ್ ಇಂದು ಮುಂಬೈಯಲ್ಲಿ ನಿಧನರಾಗಿದ್ದಾರೆ. 46ರ ಹರೆಯದ ಫರಾಝ್ ಅ.8ರಂದು ಎದೆ ನೋವಿನ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಫರಾಜ್ ಖಾನ್ ಅವರ ಆಸ್ಪತ್ರೆ ಬಿಲ್ ಪಾವತಿಸಲು ಅವರ ಕುಟುಂಬಕ್ಕೆ ನೆರವಾದ ಪೂಜಾ ಭಟ್, ನಟನ ನಿಧನದ ಕುರಿತು ಟ್ವೀಟ್ ಮಾಡಿ ದೃಢಪಡಿಸಿದ್ದಾರೆ.

- Advertisement -

ಫರೇಬ್, ಪೃಥ್ವಿ, ಮೆಹಂದಿ, ದುಲ್ಹನ್ ಬನೂ ಮೈ ತೇರಿ ಮತ್ತು ಚಾಂದ್ ಬುಜ್ ಗಯಾ ಮುಂತಾದ ಸಿನೆಮಾಗಳಲ್ಲಿ ಫರಾಜ್ ನಟಿಸಿದ್ದರು. ಶ್… ಕೋಯಿ ಹೇ, ರಾತ್ ಹೋನೆ ಕೋ ಹೈ, ಸಿಂದೂರ್ ತೇರೆ ನಾಮ್ ಕಾ ಮುಂತಾದ ಟಿವಿ ಧಾರಾವಾಹಿಗಳಲ್ಲೂ ಅವರು ನಟಿಸಿದ್ದರು.

ಫರಾಜ್ ಗೆ ಅನಾರೋಗ್ಯ ಇರುವ ಬಗ್ಗೆ ಹಣಕಾಸಿನ ಸಮಸ್ಯೆಯ ಬಗ್ಗೆ ಕಳೆದ ತಿಂಗಳು ಅವರ ಸಹೋದರ, ನಟ ಫಹ್ಮಾನ್ ಖಾನ್ ತಿಳಿಸಿದ್ದರು ಮತ್ತು ಸಹಾಯ ಕೋರಿದ್ದರು. ಜನಪ್ರಿಯ ನಟ ಸಲ್ಮಾನ್ ಖಾನ್ ಕೂಡ ಇವರಿಗೆ ಹಣಕಾಸಿನ ನೆರವು ಮಾಡಿದ್ದಾರೆ ಎಂದು ನಟಿ ಕಶ್ಮೀರಾ ಶಾ ಹೇಳಿದ್ದಾರೆ. ನಟ ಫರಾಜ್ ಚಿಕಿತ್ಸೆಗೆ 25 ಲಕ್ಷ ರೂ. ಬೇಕಾಗಬಹುದು ಎಂದು ಹೇಳಲಾಗಿತ್ತು.

ಫರಾಜ್​ಖಾನ್​ಗೆ ಅವರಿಗೆ ಸರ್ಪಸುತ್ತು ಆಗಿದ್ದು, ಬಳಿಕ ಅದು ಹೃದಯದಿಂದ ಮಿದುಳಿನವರೆಗೆ ಪಸರಿಸಿತ್ತು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.

- Advertisement -