ಕಾಂಗ್ರೆಸ್ ಪ್ರಣಾಳಿಕೆಯನ್ನು ಸಿಟಿ ರವಿ ತಾಲಿಬಾನಿಗಳ ಪ್ರೇರಣೆ ಎಂದಿರುವುದು ವಿಪರ್ಯಾಸ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಬಿಜೆಪಿ ನಾಯಕ ಸಿಟಿ ರವಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ತಾಲಿಬಾನಿಗಳ ಪ್ರೇರಣೆ ಎಂದಿರುವುದು ವಿಪರ್ಯಾಸ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2023ರ ಕೇಂದ್ರ ಬಜೆಟ್ ನಿಂದ, ತಾಲಿಬಾನಿಗಳಿಗೆ 200 ಕೋಟಿ ಅನುದಾನ ನೀಡಿರುವುದು ಪ್ರಧಾನಿ ಮೋದಿ, ಆದರೆ ಮೋದಿಯ ಭಕ್ತ ಸಿಟಿ ರವಿ ಈ ದಿನ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ತಾಲಿಬಾನಿಗಳ ಪ್ರೇರಣೆ ಎಂದಿರುವುದು ವಿಪರ್ಯಾಸ. ಮಾಲೆಗಾoವ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಭಯೋತ್ಪಾದಕಿ ಸಾದ್ವಿಪ್ರಜ್ಞಾಸಿಂಗ್ ಬಿಜೆಪಿಯ ಸಂಸದೆ, ಇಂತಹ ಪಕ್ಷದ ವಕ್ತಾರ ಸಿಟಿ ರವಿ, ನಗರ ನಕ್ಸಲ್ ಬಗ್ಗೆ ಮಾತನಾಡುವುದು ಎಂಥಹ ತಮಾಷೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ



Join Whatsapp