ಡಿಬ್ರೂಗಢ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಎಎಪಿ ನಾಯಕಿ ಆತಿಶಿ ಹೇಳಿದರು.
ಡಿಬ್ರೂಗಢ ಲೋಕಸಭಾ ಕ್ಷೇತ್ರದ ದುಲಿಯಾಜಾನ್ನಲ್ಲಿ ಸೋಮವಾರ ಎಎಪಿ ಅಭ್ಯರ್ಥಿಯ ಪ್ರಚಾರಕ್ಕಾಗಿ ನಡೆದ ರೋಡ್ ಶೋನಲ್ಲಿ ಅವರು ಮಾತನಾಡಿದರು.
‘ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಂತೆ ಕೇಜ್ರಿವಾಲ್ ಅವರೂ ಬಿಜೆಪಿ ಸೇರಿದರೆ ಒಂದೇ ದಿನದಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ. ಒಳ್ಳೆಯ ಶಾಲೆ–ಆಸ್ಪತ್ರೆಗಳನ್ನು ಕಟ್ಟಿಸಿರುವುದಕ್ಕೆ ಹಾಗೂ ದಿಟ್ಟತನದಿಂದ ಇರುವುದಕ್ಕೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ’ ಎಂದರು.