ಬಿಹಾರ ಚುನಾವಣಾ ಕಣದಲ್ಲಿ ಅಪರಾಧ ಹಿನ್ನೆಲೆಯ ವ್ಯಕ್ತಿಗಳು

Prasthutha|

ಹೊಸದಿಲ್ಲಿ: ಮೊದಲ ಹಂತದ ಬಿಹಾರ ವಿಧಾನ ಸಭಾ ಚುನಾವಣೆಗೆ ನಾಮನಿರ್ದೇಶನ ಪ್ರಕ್ರಿಯೆಯು ಕೊನೆಗೊಂಡಿದ್ದು, ಚುನಾವಣಾ ಕಣದಲ್ಲಿ ಅಪರಾಧ ಹಿನ್ನೆಲೆಯ ಮುಖಗಳು ಮತ್ತೆ ಕಂಡುಬಂದಿದೆ.

- Advertisement -

243 ಕ್ಷೇತ್ರಗಳಲ್ಲಿ ಅ.28ರಂದು ಮೊದಲನೆ ಹಂತದಲ್ಲಿ 72 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಅವುಗಳಲ್ಲಿ 11 ರೌಡಿಗಳು ಅಥವಾ ಅವರ ಪತ್ನಿಯರ ಟಿಕೆಟ್ ಪಡೆದಿದ್ದಾರೆ. ಅವುಗಳಲ್ಲಿ ಹೆಚ್ಚಿನವರು ಆರ್.ಜೆ.ಡಿ ಅಥವಾ ಜೆಡಿಯುವಿನಿಂದ ನಾಮನಿರ್ದೇಶಿತರಾಗಿದ್ದಾರೆ.

7 ಹತ್ಯೆ ಆರೋಪ ಹೊಂದಿರುವ ಅನಂತ್ ಸಿಂಗ್, ಹಿಂದೊಮ್ಮೆ ಎನ್.ಐ.ಎ ತನಿಖೆಯನ್ನು ಎದುರಿಸಿದ್ದ ಸುನಿಲ್ ಪಾಂಡೆ ಅವರಲ್ಲಿ ಒಳಗೊಂಡಿದ್ದಾರೆ.

- Advertisement -

ಛೋಟೆ ಸರ್ಕಾರ್ ಎಂದೇ ಖ್ಯಾತರಾಗಿರುವ ಅನಂತ್ ಸಿಂಗ್ ಮೊಕಾಮಾ ಸೀಟಿನಿಂದ ಆರ್.ಜೆ.ಡಿ ಪರ ಸ್ಪರ್ಧಿಸುತ್ತಿದ್ದಾರೆ. ಮನೆಯಲ್ಲಿ ಎ.ಕೆ.47 ಬಂದೂಕು ಮತ್ತು ಸ್ಫೋಟಕಗಳನ್ನು ಹೊಂದಿರುವ ಆರೋಪಕ್ಕಾಗಿ ಜೈಲಿನಲ್ಲಿದ್ದರು. 38 ಅಪರಾಧ ಪ್ರಕರಣಗಳಲ್ಲಿ ಸಿಂಗ್ ಆರೋಪಿಯಾಗಿದ್ದಾರೆ. ಅವುಗಳಲ್ಲಿ 7 ಕೊಲೆ ಆರೋಪಗಳನ್ನೊಳಗೊಂಡಂತೆ ಅಪಹರಣ, ಕೊಲೆ ಯತ್ನ ಪ್ರಕರಣಗಳೂ ಇವೆ.

Join Whatsapp