ಮುಂದಿನ ವರ್ಷದ ಆರಂಭದಲ್ಲಿ ಕೊರೋನಾ ಲಸಿಕೆ ನಿರೀಕ್ಷೆ: ಆರೋಗ್ಯ ಮಂತ್ರಿ

Prasthutha|

ಹೊಸದಿಲ್ಲಿ: ಮುಂದಿನ ವರ್ಷದ ಆರಂಭಕ್ಕಾಗುವಾಗ ಕೊರೋನಾ ವೈರಸ್ ಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದ್ದು, ಒಂದಕ್ಕಿಂತ ಹೆಚ್ಚು ಮೂಲಗಳಿಂದ ಅದು ದೊರೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ.

“ಮುಂದಿನ ವರ್ಷದ ಆರಂಭಕ್ಕಾಗುವಾಗ ದೇಶದಲ್ಲಿ  ಒಂದಕ್ಕಿಂತ ಹೆಚ್ಚು ಮೂಲಗಳಿಂದ ಲಸಿಕೆಯು ಹೊಂದುತ್ತೇವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ದೇಶದಲ್ಲಿ ಯಾವ ರೀತಿಯಲ್ಲಿ ಲಸಿಕೆಯನ್ನು ಹಂಚಬೇಕು, ಯಾರಿಗೆ ಮೊದಲು ಲಸಿಕೆಯನ್ನು ನೀಡಬೇಕು ಎಂದು ತಜ್ನರ ಗುಂಪು ಯೋಜನೆಗಳನ್ನು ರೂಪಿಸುತ್ತಿವೆ” ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ.

- Advertisement -

ಪ್ರಸ್ತುತ ಭಾರತದಲ್ಲಿ  ನಾಲ್ಕು ಕೊರೋನಾ ವೈರಸ್  ಲಸಿಕೆಗಳು ಪೂರ್ವ ವೈದ್ಯಕೀಯ ಪ್ರಯೋಗ ಹಂತದಲ್ಲಿ ದೆ. ಈ ಹಿಂದೆ ಸಚಿವರು ಕೋವಿಡ್ 19 ಔಷಧವು 2021ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಲಭ್ಯವಾಗಬಹುದೆಂದು ಹೇಳಿದ್ದರು.

- Advertisement -