ಬೆಳ್ತಂಗಡಿ : ಕರ್ತವ್ಯ ನಿರತ ಪೊಲೀಸರಿಗೆ ತಂಡವೊಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕು ಉಜಿರೆಯಲ್ಲಿ ನಡೆದಿದೆ. ಉಜಿರೆಯ ಜನಾರ್ಧನ ದೇವಸ್ಥಾನದ ದ್ವಾರದ ಬಳಿ ಘಟನೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಬೆಳ್ತಂಗಡಿ ಠಾಣೆ ಪೊಲೀಸ್ ಪಿ.ಸಿ. ವೆಂಕಟೇಶ್ ಈ ಸಂಬಂಧ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಪಿ.ಸಿ. ವೆಂಕಟೇಶ್ ಮತ್ತು ಹೋಮ್ ಗಾರ್ಡ್ ರಾಜಣ್ಣ ಅವರು ಕರ್ತವ್ಯದಲ್ಲಿದ್ದಾಗ, ದ್ವಾರದ ಬಳಿ ನೆರೆದಿದ್ದ ಜನರನ್ನು ಅಲ್ಲಿಂದ ಹೋಗುವಂತೆ ತಿಳಿಸಿದ್ದರು ಎನ್ನಲಾಗಿದೆ. ಈ ವೇಳೇ ಆರೋಪಿಗಳು ಪೊಲೀಸರನ್ನು ಮತ್ತು ಸಮವಸ್ತ್ರವನ್ನು ತುಚ್ಛವಾಗಿ ನಿಂದಿಸಿ, ಸಿಬ್ಬಂದಿಯ ಕಾಲರ್ ಹಿಡಿದೆಳೆದು, ಬಟ್ಟೆ ಹರಿದಿದ್ದಾರೆ. ಅಲ್ಲದೆ, ಆರೋಪಿಗಳು ಪೊಲೀಸ್ ಸಿಬ್ಬಂದಿಯ ಮೇಲೆ ಕೈಗಳಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು, ಕುತ್ತಿಗೆಯನ್ನು ಹಿಡಿದು ಮುಗಿಸಿ ಬಿಡುವುದಾಗಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.