ಕಾರು ಇಲ್ಲ, ರಸ್ತೆ ಇಲ್ಲ; ಸೌದಿಯ ಭವಿಷ್ಯದ ನಗರದ ವಿಶೇಷತೆಗಳನ್ನು ತಿಳಿಯೋಣ

Prasthutha|

- Advertisement -

ಕಾರುಗಳು ಮತ್ತು ರಸ್ತೆಗಳಿಲ್ಲದ ನಗರವೇ? ಹೌದು, ಅಂತಹ ಭವಿಷ್ಯದ ನಗರವನ್ನು ಸೌದಿಯ ನಿಯೋಮ್ ನಲ್ಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಕಲ್ಪಿಸಿದ್ದಾರೆ. ‘ದಿ ಲೈನ್’ ಎಂದು ಕರೆಯಲ್ಪಡುವ ಈ ಯೋಜನೆಯನ್ನು ಸೋಮವಾರ ಅನಾವರಣಗೊಳಿಸಲಾಗಿದೆ. ಈ ಕಾರ್ಬನ್ ರಹಿತ ನಗರವನ್ನು ಕನಸಿನ ಯೋಜನೆಯಾದ ನಿಯೋಮ್ ನಲ್ಲಿ ರೂಪಿಸಲಾಗುತ್ತಿದೆ. ಹತ್ತುಲಕ್ಷ ಜನರಿಗೆ ವಾಸಿಸಬಹುದಾದ ನಿಯೋಮ್‌ನಲ್ಲಿ ಕಾರ್ಬನ್ ರಹಿತ ವಾಹನ ಸೌಲಭ್ಯಗಳು ಮಾತ್ರ ಇರಲಿವೆ ಎಂದು ಸೌದಿಯ ರಾಜಕುಮಾರ ಈ ಯೋಜನೆಯನ್ನು ಪ್ರಕಟಿಸಿದ್ದಾರೆ.

ಈ ಯೋಜನೆಯು ಹತ್ತು ವರ್ಷಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ನಿಯೋಮ್ ಪಶ್ಚಿಮ ಸೌದಿ ಅರೇಬಿಯಾದ ತಬೂಕ್ ಬಳಿ ತಲೆ ಎತ್ತಲಿರುವ ಒಂದು ಕನಸಿನ ಯೋಜನೆಯಾಗಿದೆ. ಇದರ ಒಳಗೆ ‘ದಿ ಲೈನ್’ ಎಂಬ ಹೆಸರಿನ ಕಾರ್ಬನ್ ರಹಿತ ನಗರ ರೂಪುಗೊಳ್ಳಲಿದೆ. ಹತ್ತು ಲಕ್ಷ ಜನರಿಗೆ ವಸತಿ ಸೌಕರ್ಯವಿರುವ ಈ ನಗರದಲ್ಲಿ ಯಾವುದೇ ಕಾರುಗಳು ಅಥವಾ ಸಾಮಾನ್ಯ ರಸ್ತೆಗಳು ಇರುವುದಿಲ್ಲ. ಬದಲಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ನಗರವನ್ನು ಹೆಚ್ಚು ಪರಿಸರ ಸ್ನೇಹಿಯಾಗಿಸಲು ಹೆಚ್ಚಿನ ಮರಗಳನ್ನು ನೆಡಲಾಗುವುದು.

- Advertisement -

ಜಾಗತಿಕ ತಾಪಮಾನ ಏರಿಕೆ ಮತ್ತು ಸಮುದ್ರ ಮಟ್ಟ ಏರುತ್ತಿರುವ ಕಾರಣ 2050 ರ ವೇಳೆಗೆ ಒಂದು ಕೋಟಿ ಜನರು ಸ್ಥಳಾಂತರಗೊಳ್ಳಬೇಕಾಗಿರುವುದರಿಂದ ಈ ಕನಸಿನ ಯೋಜನೆಯನ್ನು ಕಲ್ಪಿಸಲಾಗಿದೆ. ಟ್ರಾಫಿಕ್ ಅಪಘಾತಗಳನ್ನು ನಿವಾರಿಸಲು ಕಾರ್ಬನ್ ರಹಿತ ಸಾರಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ಮೂಲಕ ಯೋಜನೆಗೆ ಹಣವನ್ನು ಸಂಗ್ರಹಿಸಲಾಗುವುದು.

Join Whatsapp