ಗ್ರಾವಿಟಿ ರೆಸಾರ್ಟ್ಸ್ ನ ಕಾರ್ಪೋರೇಟ್ ಕಚೇರಿ ಉದ್ಘಾಟಿಸಿದ ಕ್ರೇಜಿಸ್ಟಾರ್ ರವಿಚಂದ್ರನ್, ಸಂಸದ ತೇಜಸ್ವಿ ಸೂರ್ಯ : 150 ಕ್ಕೂ ಹೆಚ್ಚು ಕ್ಲಬ್ ಗಳೊಂದಿಗೆ ಸಹಭಾಗಿತ್ವ : ಪ್ರವಾಸೋದ್ಯಮಕ್ಕೆ ಹೊಸ ಆಯಾಮ

Prasthutha|

ಬೆಂಗಳೂರು, ಡಿ, 12: ಕೋವಿಡ್ ಸಂಕ್ರಾಮಿಕದಿಂದ ಹೊರ ಬರುತ್ತಿರುವ ಬೆನ್ನಲ್ಲೇ ಇದೀಗ ಜಗತ್ತು ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದ್ದು, ರಾಜ್ಯದಲ್ಲಿ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಗ್ರಾವಿಟಿ ಕ್ಲಬ್ ರೆಸಾರ್ಟ್ಸ್ ಇಂಡಿಯಾ ಪ್ರೈವೈಟ್ ಲಿಮಿಟೆಡ್ ಇದೀಗ ಸಜ್ಜಾಗಿದೆ.

- Advertisement -

ರಾಜಾಜಿನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಗ್ರಾವಿಟಿ ರೆಸಾರ್ಟ್ಸ್ ನ ಕಾರ್ಪೋರೇಟ್ ಕಚೇರಿಯನ್ನು ನಟ, ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ಉದ್ಘಾಟಿಸಿದರು. ನಟಿ ಅದಿತಿ ಪ್ರಭುದೇವ್,  ಸಂಜೋಸ್ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಎಂ ವಿಟ್ಟಲವಾಡಿ, ಡಾಕ್ಟರ್ ವಿಜಯಾನಂದ ಸ್ವಾಮೀಜಿ, ಮ್ಯಾಕ್ಸ್ ನ ಎಂ.ಡಿ. ಎಸ್.ಪಿ. ದಯಾನಂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗ್ರಾವಿಟಿ ರೆಸಾರ್ಟ್ಸ್ ದೇಶದ ಪ್ರಮುಖ ಸಂಸ್ಥೆಯಾಗಿದ್ದು, 150 ಕ್ಕೂ ಹೆಚ್ಚು  ರೆಸಾರ್ಟ್‌ಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಇದು ತನ್ನ ಜಾಲವನ್ನು ಭಾರತ ಮಾತ್ರವಲ್ಲದೇ ಜಗತ್ತಿನ ಪ್ರಮುಖ ಸ್ಥಳಗಳಲ್ಲೂ ವಿಸ್ತರಿಸಿಕೊಂಡಿದೆ. ಗ್ರಾಹಕರಿಗೆ ಕೈಗೆಟುಕುವ ಮತ್ತು ಗುಣಾತ್ಮಕ ರಜಾದಿನಗಳ ಮಜಾ ಅನುಭವಿಸಲು ಸಕಲ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ.

- Advertisement -

ಸಂಜೋಸ್ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಎಂ ವಿಟ್ಟಲವಾಡಿ ಮಾತನಾಡಿ, ಗ್ರಾವಿಟಿ ರೆಸಾರ್ಟ್ಸ್ ಸ್ಯಾನ್‌ಜೋಸ್ ಗ್ರೂಪ್ ಆಫ್ ಕಂಪನಿಗಳ ಭಾಗವಾಗಿದೆ. ಇದು ಸ್ಯಾನ್‌ಜೋಸ್ ವೆಂಚರ್ಸ್, ಸ್ಯಾನ್‌ಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್ ಮತ್ತು ಗ್ರಾವಿಟಿ ಸ್ಪೋರ್ಟ್ಸ್‌ನಂತಹ ಅಂಗಸಂಸ್ಥೆಗಳನ್ನು ಹೊಂದಿದೆ ಎಂದು ಹೇಳಿದರು.



Join Whatsapp