ನಾನು ಹಿಂದೂ, ಹಿಂದುತ್ವವಾದಿ ಅಲ್ಲ: ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Prasthutha|

ಜೈಪುರ: ನಾನು ಹಿಂದೂ,  ಹಿಂದುತ್ವವಾದಿ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಭಾನುವಾರ ಜೈಪುರದಲ್ಲಿ  ‘ಮೆಹೆಂಗಾಯೀ ಹಟಾವೋ ಮಹಾ ರ‍್ಯಾಲಿ’  (ಬೆಲೆಯೇರಿಕೆ ವಿರುದ್ಧದ ರ‍್ಯಾಲಿ)ಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,  “ದೇಶದ ಮುಂದೆ ಇಂದು ಇರುವ ಯುದ್ಧ ಯಾವುದು?  ಇಂದು ದೇಶದ ರಾಜಕೀಯದಲ್ಲಿ ಎರಡು ಪದಗಳ ಘರ್ಷಣೆ ನಡೆಯುತ್ತಿದೆ.  ಒಂದು ಪದ ಹಿಂದೂ ಮತ್ತು ಇನ್ನೊಂದು ಪದ ಹಿಂದುತ್ವ.  ಇದು ಒಂದೇ ವಿಷಯವಲ್ಲ. ಎರಡು ವಿಭಿನ್ನ ಪದಗಳಿವೆ ಮತ್ತು ವಿಭಿನ್ನ ಅರ್ಥಗಳಿವೆ ಎಂದು ತಿಳಿಸಿದರು.

ನಾನು ಹಿಂದುವೇ ಹೊರತು ಹಿಂದುತ್ವವಾದಿಯಲ್ಲ.  ಹಿಂದೂ ಮತ್ತು ಹಿಂದುತ್ವವಾದಿಗಳ ನಡುವಿನ ವ್ಯತ್ಯಾಸವೆಂದರೆ,  ಹಿಂದೂ ಸತ್ಯವನ್ನು ಹುಡುಕುತ್ತದೆ,  ಅದನ್ನು ಸತ್ಯಾಗ್ರಹ ಎಂದು ಕರೆಯಲಾಗುತ್ತದೆ.  ಆದರೆ ಹಿಂದುತ್ವವಾದಿ ಶಕ್ತಿ (ಅಧಿಕಾರ) ಗಾಗಿ ಹುಡುಕುತ್ತದೆ ಮತ್ತು ಅದನ್ನು ಸತ್ತಾಗ್ರಹ (ಹಿಂದಿಯಲ್ಲಿ ಸತ್ತಾ ಎಂದರೆ ಅಧಿಕಾರ) ಎಂದು ಕರೆಯಲಾಗುತ್ತದೆ ಎಂದು  ಹೇಳಿದ್ದಾರೆ.

- Advertisement -

Join Whatsapp