ಪಕ್ಷದ ತರಗತಿಗಳಲ್ಲಿ ಕಾರ್ಯಕರ್ತರಿಗೆ ‘ಹಿಂದುತ್ವ’ ಕಲಿಸಲು ‘ಸಿಪಿಎಂ’ ನಿರ್ಧಾರ

Prasthutha|

ತಿರುವನಂತಪುರಂ: ಆರೆಸ್ಸೆಸ್  ಮತ್ತು ಕೋಮುವಾದವನ್ನು ಎದುರಿಸುವ ಸಲುವಾಗಿ ಸಿಪಿಎಂ ತನ್ನ ಕಾರ್ಯಕರ್ತರಿಗೆ ‘ಹಿಂದುತ್ವ’ವನ್ನು ಕಲಿಸಲು  ಮುಂದಾಗಿದ್ದು, ಕೋಮುವಾದವನ್ನು ಎದುರಿಸಲು ಹಿಂದುತ್ವದ ಅಧ್ಯಯನ ಮತ್ತು ಮೌಲ್ಯಮಾಪನ ಮಾಡುವುದು ಅಗತ್ಯ ಎಂದು ಸಿಪಿಎಂ ಹೇಳಿದೆ.

- Advertisement -

ಹಿಂದುತ್ವ ಎಂದರೇನು ?  ಆರೆಸ್ಸೆಸ್  ಅದನ್ನು ಹೇಗೆ ಬಳಸುತ್ತಿದೆ ಎಂಬುದನ್ನು ಅಧ್ಯಯನ ಮಾಡಲು ಮತ್ತು ಅದನ್ನು ಪಕ್ಷದ ತರಗತಿಗಳಲ್ಲಿ ಕಲಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

 ಆರೆಸ್ಸೆಸ್  ಅನ್ನು ಎದುರಿಸುವ ಪ್ರಯತ್ನಗಳ ಭಾಗವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ತರಗತಿಗಳ ಪಠ್ಯಕ್ರಮದಲ್ಲಿ ಹಿಂದುತ್ವದ ಅಧ್ಯಯನವನ್ನು ಸಹ ಸೇರಿಸಲಾಗುವುದು ಎಂದು ದೈನಿಕವೊಂದು ವರದಿ ಮಾಡಿದೆ. ಆರ್ ಎಸ್ ಎಸ್ ಮತ್ತು ಹಿಂದುತ್ವವನ್ನು ಪಠ್ಯಕ್ರಮದಲ್ಲಿ ಸೇರಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಕೇಂದ್ರ ನಾಯಕತ್ವದ ಜವಾಬ್ದಾರಿಯಾಗಿದೆ.

- Advertisement -

ಆರೆಸ್ಸೆಸ್ ನ ಕಾರ್ಯ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಜನರಿಗೆ ಶಿಕ್ಷಣ ನೀಡಿದರೆ ಮಾತ್ರ ಕೋಮುವಾದವನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬ ತಿಳುವಳಿಕೆಯೊಂದಿಗೆ ಶಿಕ್ಷಣದ ಪಠ್ಯಕ್ರಮವನ್ನು ಪರಿಷ್ಕರಿಸಲು ಪಕ್ಷವು ಯೋಜನೆ ಹಾಕುತ್ತಿದೆ. ದೆಹಲಿಯ ಹರ್ಕಿಶನ್ ಸಿಂಗ್ ಸುರ್ಜಿತ್ ಭವನ್ ಹೊಸ ಪಠ್ಯಕ್ರಮವನ್ನು ಕಲಿಸಲು ಶಾಶ್ವತ ಶಾಲೆಯಾಗಿ ಕಾರ್ಯನಿರ್ವಹಿಸುತ್ತದೆ.

Join Whatsapp