ಡಾ. ಬಿ ಶ್ರೀನಿವಾಸ ಕಕ್ಕಿಲ್ಲಾಯರ ಮೇಲೆ ಕೇಸ್ : ಸಿಪಿಐ(ಎಂ) ಆಕ್ಷೇಪ

Prasthutha|

ನಾಡಿನ ಸಮಾಜಮುಖಿ ವೈದ್ಯರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯರ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೇಸ್ ದಾಖಲಿಸಿರುವುದಕ್ಕೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ. ಸೂಪರ್ ಮಾರ್ಕೆಟ್ ಒಳಗಡೆ ಮಾಸ್ಕ್ ಧರಿಸಲಿಲ್ಲ ಎಂಬ ಕಾರಣಕ್ಕೆ ನಡೆದ ವಾದ ವಿವಾದದ ಅನ್ವಯ ಈ ಕೇಸನ್ನು ದಾಖಲಾತಿಸಲಾಗಿದೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದು, ಇದು ಪಿತೂರಿ ಮತ್ತು ಷಡ್ಯಂತ್ರದ ಭಾಗವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ವೀಡೀಯೋ ದಿಂದ ತಿಳಿದು ಬರುತ್ತದೆ ಎಂದು ಸಿಪಿಐ(ಎಂ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಈ ಅವದಿಯಲ್ಲಿ ಆಡಳಿತ ಪಕ್ಷದ ನಾಯಕರುಗಳು ಹಲವಾರು ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸದೆ ಭಾಗವಹಿಸಿದ್ದರು. ಬಗ್ಗೆ ಪೋಲೀಸ್ ಇಲಾಖೆ ಯಾವುದೆ ಕೇಸ್ ಹಾಕದೆ ಇದ್ದು ಸರ್ಕಾರದ ವಿರುದ್ಧ ಡಾ.ಕಕ್ಕಿಲ್ಲಾಯರು ತಪ್ಪು ನೀತಿಗಳ ವಿರುದ್ದ ನಡೆಸುತ್ತಿದ್ದ ಧ್ವನಿಯನ್ನು ಅಡಗಿಸುವ ಸರ್ಕಾರದ ಚಾಳಿಯ ಭಾಗವಾಗಿ ಈ ಕೇಸ್ ಹಾಕಲಾಗಿದೆ. ಸಿಪಿಐ (ಎಂ) , ಡಾ.ಬಿ ಶ್ರೀ ನಿವಾಸ ಕಕ್ಕಿಲ್ಲಾಯರೊಂದಿಗೆ ನಿಲ್ಲುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp