ನವದೆಹಲಿ: ಕೋವಿಡ್ ಲಸಿಕೆಗಳು ಹೃದಯಾಘಾತಕ್ಕೆ ಕಾರಣವಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟಪಡಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ನಡೆಸಿದ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಸಚಿವರು, ಕೊರೊನಾ ಲಸಿಕೆಯಿಂದ ಹಾರ್ಟ್ ಅಟ್ಯಾಕ್ ಸಂಭವಿಸುವುದಿಲ್ಲ ಎಂದಿದ್ದಾರೆ.
ಇಂದು ಯಾರಿಗಾದರೂ ಪಾರ್ಶ್ವವಾಯು ಇದ್ದರೆ ಅದಕ್ಕೆ ಕೋವಿಡ್ ಲಸಿಕೆಯೇ ಕಾರಣ ಎಂದು ಭಾವಿಸುತ್ತಾರೆ. ಲಸಿಕೆ ಹೃದಯಾಘಾತಕ್ಕೆ ಕಾರಣವಲ್ಲ ಎಂದು ಐಸಿಎಂಆರ್ ವಿಸ್ತೃತ ಅಧ್ಯಯನ ಮಾಡಿದೆ. ಒಬ್ಬರ ಜೀವನಶೈಲಿ, ತಂಬಾಕು ಮತ್ತು ಮದ್ಯದ ಸೇವನೆ ಸೇರಿದಂತೆ ಹೃದಯಾಘಾತಕ್ಕೆ ನಾನಾ ಕಾರಣಗಳಿವೆ ಎಂದು ಅವರು ಹೇಳಿದರು.